ಕೊರೋರೋನಾ ಸೋಂಕು ಇಡೀ ರಾಷ್ಟ್ರ ವ್ಯಾಪ್ತಿ ಹರಡುತ್ತಿದ್ದು ಸಾಕಷ್ಟು ಜನರು ಕೊರೋನಾ ವೈರಸ್ ನಿಂದ ಬಳಲುತ್ತಿದ್ದಾರೆ  ಈ ಕೊರೋನಾ ವೈರಸ್ ಹರಡುವಾಗ ಯಾವ ವಯಸ್ಸಿನ ಮಿತಿಯೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಡುವ ಈ ವೈರಸ್ ಚಿಕ್ಕ ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ಬಹಳ ವಿಕೃತ ರೂಪ ತಾಳುತ್ತದೆ ಹಾಗೂ ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಪ್ರಾಣಾಪಾಯದಿಂದ  ಪಾರಾಗಬಹುದು ಆದರೆ ಅತೀ ಹೆಚ್ಚು ಸೋಂಕು ಕಾಣಿಸಿಕೊಂಡಿರುವುದು ಯುವಕರಲ್ಲಿ ಎಂಬ ಅಂಶ ಕೆಲವು ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ.  ಇನ್ನ ಮಹಾನಗರ ಬೆಂಗಳೂರಿನಲ್ಲಿ ಎಷ್ಟು ಜನ ಯುವಕರಿಗೆ ಈ ಸೋಂಕು ಹರಡಿದೆ ಗೊತ್ತಾ?

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡಿರುವ ಮಾ.೩೦ರ ಅಂಕಿ ಅಂಶಗಳ ಪ್ರಕಾರ ೩೯ ಮಂದಿಗೆ ಕೊರೊನಾ ತಗುಲಿದ್ದು ಅದರಲ್ಲಿ 16 ಮಂದಿ ಯುವಕರಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

 

ಬಿಬಿಎಂಪಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ೩೯ ಸೋಂಕಿತ ಪ್ರಕರಣಗಳಲ್ಲಿ ೧ ಮಹಿಳೆ, ೨೦ ಪುರುಷರಿದ್ದಾರೆ. ಇದರಲ್ಲಿ 10 ವರ್ಷದೊಳಗಿನ ಒಂದು ಮಗು ಕೂಡ ಸೇರಿದೆ.

 

ಇನ್ನುಳಿದವರು 23  ಮಂದಿಯು 30  ವರ್ಷದಿಂದ 70  ವರ್ಷದವರಾಗಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

 

ಬಿಬಿಎಂಪಿ ಎಂಟು ವಲಯಗಳಲ್ಲಿ ಅತಿ ಹೆಚ್ಚು 12  ಸೋಂಕು ಪ್ರಕರಣಗಳು ಪೂರ್ವ ವಲಯದಲ್ಲಿ ಕಂಡು ಬಂದಿದೆ.ಸೋಂಕು ದೃಢಪಟ್ಟ ವ್ಯಕ್ತಿಯೊಂದಿಗೆ ಪ್ರಾಥಮಿಕ ಹಾಗೂ ಪರೋಕ್ಷ ಸಂಬಂಧ ಹೊಂದಿದ್ದ 14.910 `ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಅದರಲ್ಲಿ ಮಾರ್ಚ್ ೩೧ರವರೆಗೆ 10,248 ಮಂದಿಯ ಹೋಮ್ ಕ್ವಾರಂಟೈನ್ ಅವಧಿ ಮುಗಿದಿದೆ.

 

ನಗರದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಮಾರ್ಚ್ 8 ರಂದು ಪತ್ತೆಯಾಗಿತ್ತು. ಅದಾದ ಬಳಿಕ ಪ್ರತಿದಿನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಆದರೆ ಮಾರ್ಚ್ 27 ರಿಂದ ಮಾ.30ರವರೆಗೆ ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಉಳಿದಂತೆ ದಕ್ಷಿಣ ವಲಯಗಳಲ್ಲಿ 8 ಮಹದೇವಪುರದಲ್ಲಿ 7, ಬೊಮ್ಮನಹಳ್ಳಿಯಲ್ಲಿ 6 ಪಶ್ಚಿಮ 4, ಆರ್‌ಆರ್ನಗರ ಹಾಗೂ ಯಲಹಂಕ ವಲಯದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

 

 

 

మరింత సమాచారం తెలుసుకోండి: