ಬೆಂಗಳೂರು: ಆಕ್ಷನ್ ಪ್ರಿನ್ಸ್, ಅದ್ದೂರಿಯಾಗಿ ಬೆಳೆದ ಬಹದ್ದೂರ್ ಹುಡುಗ, ಭರ್ಜರಿ ಪೊಗರಿನ ನಟ ಧ್ರುವಾ ಸರ್ಜಾ ಅವರು ಮದುವೆಯನ್ನು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಸರ್ಜಾ ಕುಟುಂಬದಿಂದ ಸಿಹಿ ಸುದ್ದಿಯೊಂದು ಸ್ಪೋಟವಾಗಿದೆ. ಧ್ರುವಾ ಸರ್ಜಾ ಅವರು ಬಹುಕಾಲದ ಗೆಳತಿ ಪ್ರೇರಣಾರೊಂದಿಗೆ ಈ ಹಿಂದೆಯೇ ನಿಶ್ಚಿತಾರ್ಥ ನೆರವೇರಿಸಿ ಕೊಂಡಿದ್ದರು. ಇಬ್ಬರ ಮದುವೆ ದಿನಾಂಕದ ಬಗ್ಗೆ ಆಗಾಗ ವದಂತಿಗಳು ಕೇಳಿಬರುತ್ತಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗು ಸರ್ಜಾ ಕುಟುಂಬವೇ ಉತ್ತರ ನೀಡಿದ್ದು, ಆಮಂತ್ರಣ ಪತ್ರಿಕೆಯನ್ನು ಬಹಿರಂಗಪಡಿಸಿದೆ.


ನವೆಂಬರ್  ತಿಂಗಳು 24 ರಂದು ಧ್ರುವಾ ಮತ್ತು ಪ್ರೇರಣಾ ಸಪ್ತಪದಿ ತುಳಿಯಲಿದ್ದಾರೆ. ಜೆಪಿ ನಗರದ ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್​ನಲ್ಲಿ ಅದ್ಧೂರಿ ಮದುವೆ ಸಮಾರಂಭ ಜರುಗಲಿದೆ ಎಂದು ಧ್ರುವಾ ಸರ್ಜಾ ಫ್ಯಾಮಿಲಿಯೇ ಅಧಿಕೃತವಾಗಿ ತಿಳಿಸಿದೆ. ಸಿನಿಮಾ ವಿಚಾರಕ್ಕೆ ಬಂದರೆ ಸದ್ಯ ಧ್ರುವಾ ನಂದ ಕಿಶೋರ್​ ನಿರ್ದೇಶನದ ಪೊಗರು ಚಿತ್ರದಲ್ಲಿ ನಟಿಸಿ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಚಿತ್ರದ ಡೈಲಾಗ್​ ಟ್ರೈಲರ್​ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಯೂಟ್ಯೂಬ್​ ನಲ್ಲಿ ದಾಖಲೆ ಬರೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. 


ನಾನು ನೋಡೋಕೆ ಖರಾಬಾಗಿ ಇರಬಹುದು, ಗಡ್ಡ ಮೀಸೆ ಕೂಡ ಜಾಸ್ತಿನೇ ಬಿಟ್ಟು ಕೊಂಡಿದ್ದೇನೆ ಆದರೆ ನಮ್ಮ ಮನಸ್ಸು ಮಾತ್ರ ಮುಗ್ಧ ಅಮಾಯಕ ದ್ದು ಕಣೇ ಎಂದು ರಶ್ಮಿಕಾ ಮಂದಣ್ಣಾಗೆ ಪೊಗರು  ಚಿತ್ರದಲ್ಲಿ ಹೇಳಿರುವ ಡೈಲಾಗ್ ಸಖತ್ ಸದ್ದು ಮಾಡುತ್ತಿದೆ. ವರ್ಷಕ್ಕೊಂದು ಸಿನಿಮಾ ಮಾಡಿದರೂ ಸಹ ಕೋಟಿಗಟ್ಟಲೆ ಸಂಭಾವನೆ ಪಡೆಯು ತ್ತಾರೆ ನಟ ಧ್ರುವಾ ಸರ್ಜಾ. ಇನ್ನೊಂದು ಮುಖ್ಯವಾದ ವಿಷಯ ಎಂದರೆ ಧ್ರುವಾ ಸರ್ಜಾಗೆ ಭರ್ಜರಿಯಾಗಿ ಸಾತ್ ಕೊಡುತ್ತಿರುವವರು  ಖ್ಯಾತ ನಟ ಅರ್ಜುನ್ ಸರ್ಜಾ. ಹೌದು, ಮೊದಲಿನಿಂದಲೂ ಧ್ರುವಾ ಗೆ ಬೆನ್ನೆಲುಬಾಗಿ ನಿಂತಿದ್ದೇ ಈ ನಟ. ಸಾಕಷ್ಟು ವಿಚಾರಗಳು ಮೈಮೇಲೆ ಬಂದಾಗ ಅದನ್ನು ಧೈರ್ಯದಿಂದ ಎದುರಿಸಿದ್ದೇ  ಇವರು. ಇದೀಗ ಧ್ರುವಾ ಸರ್ಜಾ ಮದುವೆಯ ಆಮಂತ್ರಣ ಕ್ಕೆ ಬಹುತ್ ಮಸ್ತ್ ಹೈ ಎಂದಿದ್ದಾರಂತೆ.


మరింత సమాచారం తెలుసుకోండి: