ಬೆಂಗಳೂರು: ಸ್ಯಾಂಡಲ್ ವುಡ್ ನ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಇಷ್ಟು ದಿನ ಬರೀ ಪೋಸ್ಟರ್​​ಗಳಲ್ಲೇ ಸೌಂಡ್​ ಮಾಡ್ತಿದ್ದು, ಫೈನಲಿ ಟೀಸರ್​​ ರಿವೀಲ್​ ಮಾಡಿ ಧೂಳೆಬ್ಬಿಸಿದೆ. ಸ್ವತ: ದರ್ಶನ್​ ಇದು ಜಸ್ಟ್​ ಸ್ಯಾಂಪಲ್​ ಅಷ್ಟೆ ಅಂದು ಬಿಟ್ಟಿದ್ದಾರೆ. ಇದೀಗ ರಾಬರ್ಟ ದಾಖಲೆಯ ವಿವ್ಸ್ ಪಡೆದುಕೊಂಡಿದೆ. 
 
ಕನ್ನಡ ಚಿತ್ರರಂಗದ ಮೋಸ್ಟ್​ ಎಕ್ಸ್​ ಪೆಕ್ಟೆಡ್​ ಹೈವೋಲ್ಟೇಜ್​ ಆ್ಯಕ್ಷನ್ ಎಂಟ್ರಟ್ರೈನರ್​​ ರಾಬರ್ಟ್. ತರುಣ್​ ಸುಧೀರ್​​ ನಿರ್ದೇಶನದ ರಾಬರ್ಟ್​​ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್​ ಬಂಡವಾಳ ಹಾಕಿದ್ದಾರೆ. ಡಿ ಬಾಸ್​ ದರ್ಶನ್​ ಬರ್ತ್​ಡೇ ಸ್ಪೆಷಲ್ಲಾಗಿ ಟೀಸರ್​​ ರಿವೀಲ್​ ಆಗಿದ್ದು, ರಾಬರ್ಟ್​​ ರಾಕಿಂಗ್​ ಅವತಾರಕ್ಕೆ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಟೀಸರ್​ಗೆ ಟ್ರಮಂಡಸ್​ ರೆಸ್ಪಾನ್ಸ್​ ಸಿಕ್ಕಿದ್ದು, ಯೂಟ್ಯೂಬ್​ ನಲ್ಲಿ ಸಖತ್ ಸೌಂಡ್​ ಮಾಡ್ತಿದ್ದು ದಾಖಲೆಯ ವಿವ್ಸ್ ಪಡೆದುಕೊಂಡಿದೆ. 
 
ನಾಯಕಿ ಆಶಾ ಭಟ್​​​ ವಾಯ್ಸ್​ ಓವರ್​​ ಹಿನ್ನಲೆಯಲ್ಲಿ ಶುರುವಾಗೋ ಟೀಸರ್​, ನಿಧಾನವಾಗಿ ರಾಬರ್ಟ್​​​ ಪ್ರಪಂಚಕ್ಕೆ ನೋಡುಗನನ್ನ ಸೆಳೆಯುತ್ತೆ. ರಾಮ ಮತ್ತು ರಾವಣನಾಗಿ ಎರಡು ವಿಭಿನ್ನ ಶೇಡ್​ಗಳಲ್ಲಿ ದರ್ಶನ ಕೊಟ್ಟಿರೋ ರಾಬರ್ಟ್​ ದರ್ಶನ್​ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಬೈಕ್​ ಏರಿ, ಬಿರುಗಾಳಿಯಂತೆ ತೂರಿ ಬರೋ ರಾಬರ್ಟ್​ ಎದುರಾಳಿ ಪಾಲಿಗೆ ಅಕ್ಷರಶಃ ದಶಕಂಠ ರಾವಣನ ಪರಿಚಯ ಮಾಡಿಸ್ತಾನೆ. ದರ್ಶನ್ ಖದರ್ರು, ಆ್ಯಕ್ಷನ್​ ಧಮಾಕ, ಡೈಲಾಗ್​​ ಡೆಲಿವರಿ, ಗಹಗಹಿಸಿ ನಕ್ಕಿರೋ ಪರಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಇನ್ನು ಮೇಕಿಂಗ್​, ಕಲರ್​​ ಕಾಂಬಿನೇಷನ್​, ಅರ್ಜುನ್​ ಜನ್ಯಾ ಮ್ಯೂಸಿಕ್​​ ಸಖತ್​ ಕಿಕ್​ ಕೊಡುವಂತಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ, ರಾಬರ್ಟ್​ ಟೀಸರ್​ ಅದ್ಭುತವಾಗಿದ್ದು ಚಿತ್ರದ ಮೇಲೆ ಅಭಿಮಾನಿಗಳಿಗಿರುವ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. 
 
ದರ್ಶನ್​​ ಸಿನಿಮಾ ಟೀಸರ್, ಟ್ರೈಲರ್​, ಮೋಷನ್​ ಪೋಸ್ಟರ್​ ಯೂಟ್ಯೂಬ್​ನಲ್ಲಿ ಯಾವ ರೇಂಜಿಗೆ ಸೌಂಡ್​ ಮಾಡುತ್ತೆ ಅಂತ ಗೊತ್ತೇಯಿದೆ. ರಾಬರ್ಟ್​ ಟೀಸರ್ ​​ಗೂ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 1.2 ಮಿಲಿಯನ್​ ವೀವ್ಸ್​ ಸಾಧಿಸಿತ್ತು. ವೀವ್ಸ್​ ಮಾತ್ರವಲ್ಲ ಲಕ್ಷಾಂತರ ಲೈಕ್ಸ್​, ಕಾಮೆಂಟ್ಸ್​ ಗಿಟ್ಟಿಸಿಕೊಂಡು ಸದ್ದು ಮಾಡ್ತಿದೆ. ಏಪ್ರಿಲ್​​​ ನಲ್ಲಿ ಚಿತ್ರ ಅಬ್ಬರಿಸಲು ಸಿದ್ಧವಾಗಿದೆ.
 

మరింత సమాచారం తెలుసుకోండి: