ಓಂ ಸಿನಿಮಾ 25 ವರ್ಷಗಳನ್ನ ಪೂರೈಸಿದ ಸಂಭ್ರಮದಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಮತ್ತು ಡೈರೆಕ್ಟರ್ ಉಪೇಂದ್ರ ಇನ್​ಸ್ಟ್ರಾಗ್ರಾಂ ಲೈವ್​​​​​​​​ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಓಂ ಸಿನಿಮಾ ಸಕ್ಸಸ್​ ಬಗ್ಗೆ ಮಾತನಾಡ್ತಿದ್ದ ಶಿವಣ್ಣನಿಗೆ ಫ್ಯಾನ್ಸ್​ ಒಂದಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳನ್ನ ಕೇಳಿದ್ದಾರೆ. ಅದಕ್ಕೆ ಶಿವಣ್ಣ ಕೂಡ ಖುಷಿಯಿಂದ್ಲೇ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳು ಕೇಳಿದ ಪ್ರೆಶ್ನೆಗಳು ಏನು ಗೊತ್ತಾ..?

 

ಸೋಶಿಯಲ್​ ಮೀಡಿಯಾ ಲೈವ್​ನಲ್ಲಿ ಶಿವಣ್ಣನಿಗೆ ಪ್ರಶ್ನೆ ಕೇಳಿದ ಒಬ್ಬ ಅಭಿಮಾನಿ, ನೀವೂ ಮತ್ತು ಪುನೀತ್ ರಾಜ್​ಕುಮಾರ್ ಒಟ್ಟಿಗೆ ಸಿನಿಮಾ ಮಾಡೋದು ಯಾವಾಗ ಅಂತ ಕೇಳಿದ್ದಾರೆ. ಇದಕ್ಕೆ ಶಿವಣ್ಣ ಸದ್ಯದಲ್ಲೇ ನಾನು ಅಪ್ಪು ಸಿನಿಮಾ ಮಾಡ್ತಿವಿ. ಒಂದೊಳ್ಳೆ ಕಥೆಗಾಗಿ ಕಾಯ್ತಿದ್ದೀವಿ. ಅಷ್ಟೇ ಅಲ್ಲ ಅಂಥದೊಂದು ಕಥೆ ಬಂದ್ರೆ ನಮ್ಮ ಹೋಮ್ ಬ್ಯಾನರ್​ನಲ್ಲಿಯೇ ಸಿನಿಮಾ ಮಾಡ್ತಿವಿ ಅನ್ನೋ ಉತ್ತರ ಕೊಟ್ಟಿದ್ದಾರೆ ಶಿವಣ್ಣ.

 

ಅಂದ್ಹಾಗೇ ಅಪ್ಪು ಮತ್ತು ಶಿವಣ್ಣ ಒಟ್ಟಿಗೆ ಸಿನಿಮಾ ಮಾಡ್ಬೇಕು ಅನ್ನೋದು, ಪ್ರತಿಯೊಬ್ಬ ದೊಡ್ಮನೆ ಅಭಿಮಾನಿಯ ಕನಸು. ಈ ಹಿಂದೆ ಕೂಡ ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ದೇಶನದಲ್ಲಿ ಅಪ್ಪು-ಶಿವಣ್ಣ ಸಿನಿಮಾ ಮಾಡೋದು ಕನ್ಫರ್ಮ್​ ಆಗಿತ್ತು. ಆದರೆ, ಅದ್ಯಾಕೋ ಆ ಸಿನಿಮಾ ಟೇಕಾಫ್​ ಆಗಲೇಯಿಲ್ಲ. ಆ ಕನಸು ಕನಸಾಗೇ ಉಳಿತು. ಆದರೆ, ಅಭಿಮಾನಿಗಳು ಮಾತ್ರ ಇವರಿಬ್ಬರನ್ನು ಒಟ್ಟಿಗೆ ಒಂದೇ ಸ್ಕ್ರೀನ್​ನಲ್ಲಿ ನೋಡೊ ಆಸೆಯಿಂದ ಈವರೆಗೂ ಕಾಯ್ತಿದ್ದಾರೆ. ಅಷ್ಟೇ ಈ ಪ್ರಶ್ನೆಗೆ ಬಹಳಷ್ಟು ಸಾರಿ ಪವರ್ ಸ್ಟಾರ್ ಕೂಡ ಇದೇ ಉತ್ತರವನ್ನ ಕೊಟ್ಟಿದ್ದಾರೆ. ಹಾಗಾಗಿ ಶಿವಣ್ಣ-ಅಪ್ಪು , ಫ್ಯಾನ್ಸ್​ಗೆ ಪ್ರಾಮಿಸ್ ಮಾಡಿರೋ ಹಾಗೇ ಆದಷ್ಟು ಬೇಗ ಒಟ್ಟಿಗೆ ತೆರೆಮೇಲೆ ಒಂದಾಗ್ಲಿ ಅನ್ನೋದೇ ಫ್ಯಾನ್ಸ್​ ಹೆಬ್ಬಯಕೆ.

 

ಇನ್ನು ಇದೇ ಸೋಶಿಯಲ್​ ಮೀಡಿಯಾ ಲೈವ್​ನಲ್ಲಿ ಮತ್ತೊಬ್ಬ ಅಭಿಮಾನಿ ಶಿವಣ್ಣ ಮತ್ತು ಚಾಲೆಂಜಿಂಗ್​ ಸ್ಟಾರ್ ದರ್ಶನ್​ರನ್ನ ಸಿಲ್ವರ್​​ ಸ್ಕ್ರೀನ್​ ಮೇಲೆ ಒಟ್ಟಿಗೆ ನೋಡೋ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ನೀವೂ ಮತ್ತು ದರ್ಶನ್​ ಒಟ್ಟಿಗೆ ಸಿನಿಮಾ ಮಾಡಿ ಅಂತ ಕೇಳಿದ ಪ್ರಶ್ನೆಗೆ ಶಿವಣ್ಣ, ಪಾಸಿಟಿವ್​ ಉತ್ತರ ಕೊಟ್ಟಿದ್ದಾರೆ. ಒಂದೊಳ್ಳೆ ಕಥೆ ಬಂದ್ರೆ ಖಂಡಿತಾ ಸಿನಿಮಾ ಮಾಡ್ತಿವಿ ಅಂತ ಹೇಳಿದ್ದಾರೆ.

ಈ ಹಿಂದೆ ಕೂಡ ಸಿನಿಮಾ ಮುಹೂರ್ತವೊಂದರಲ್ಲಿ ದಚ್ಚು ಮತ್ತು ಶಿವಣ್ಣ ಒಟ್ಟಿಗೆ ಸಿಕ್ಕಾಗ ಈ ಮಾತನ್ನ ಇಬ್ಬರೂ ಹೇಳಿದ ನೆನಪಿರಬಹುದು. ಲಾಂಗ್​ ಹಿಡಿಯೋದಾದ್ರೆ ಶಿವಣ್ಣ ಲಾಂಗ್​ ಹಿಡಿಲಿ. ನಾನು ಹಿಂದೆ ಇರ್ತಿನಿ ಅಂದಿದರು. ದರ್ಶನ್​. ಇಬ್ಬರ ನಡುವೆ ಒಳ್ಳೇ ಬಾಂಧ್ಯವ್ಯವಿರೋದ್ರಿಂದ, ಇಬ್ಬರಿಗೂ ಹೊಂದುವಂತಹ ಒಂದೊಳ್ಳೆ ಸಬ್ಜೆಕ್ಟ್​ನ್ನ ಯಾರಾದ್ರೂ ರೆಡಿಮಾಡಿದ್ರೆ, ಬಹುಶಃ ಇಬ್ಬರೂ ಗ್ರೀನ್​ ಸಿಗ್ನಲ್​ ಕೊಡೋದರಲ್ಲಿ ನೋ ಡೌಟ್.

 

ಇನ್ನು ಇದೇ ಟೈಮ್​ನಲ್ಲಿ ಕಿಚ್ಚ ಸುದೀಪ್​ ಜೊತೆಯೂ ಮತ್ತೆ ಸ್ಕ್ರೀನ್​ ಶೇರ್ ಮಾಡೋದಾಗಿಯೂ ಮಾತನಾಡಿರೋ ಶಿವಣ್ಣ, ಓಂ 2 ಬಗ್ಗೆ ಕೂಡ ಒಂದು ಹಿಂಟ್ ಕೊಟ್ಟಿದ್ದಾರೆ. ಉಪ್ಪಿ ಮತ್ತು ನಾನು ಸದ್ಯದಲ್ಲೇ ಒಂದಾಗ್ತಿವಿ. ನಾನು ಕೂಡ ಕಾತುರದಿಂದ ಕಾಯ್ತಾ ಇದ್ದೀನಿ. ಆದಷ್ಟು ಬೇಗ ಅವರ ನಿರ್ದೇಶನದಲ್ಲಿ ಕೆಲಸ ಮಾಡ್ತಿನಿ ಅಂದಿದ್ದಾರೆ.

 

ಅಷ್ಟೇ ಅಲ್ಲ ಈ ಮಾತಿಗೆ ಉಪ್ಪಿ ಕೂಡ ಯೆಸ್ ಅಂತ ಗ್ರೀನ್​ ಸಿಗ್ನಲ್ ಕೊಟ್ಟಿದ್ದಾರೆ. ಆದಷ್ಟು ಬೇಗ ಇಬ್ಬರೂ ಸಿನಿಮಾ ಮಾಡೋಣ ಅಂತ ಹೇಳಿದಾರೆ. ಹೀಗೆ ಮಾತನಾಡುವಾಗ ಶಿವಣ್ಣ, ಉಪ್ಪಿಗೆ ಸಖತ್​ ಐಡಿಯಾವೊಂದನ್ನ ಕೊಟ್ಟಿದ್ದಾರೆ. ಯೆಸ್​ ಇದೀಗ ಜಗತ್ತನ್ನೇ ಬೆಚ್ಚಬೀಳಿಸಿರೋ ಕೋವಿಡ್ 19 ಮೇಲೆಯೇ ಒಂದೊಳ್ಳೆ ಸಬ್ಜೆಕ್ಟ್​ ಮಾಡಿ ಅಂತ ಶಿವಣ್ಣ ಉಪ್ಪಿ ತಲೆಗೆ ಹುಳ ಬಿಟ್ಟಿದ್ದಾರೆ.

ಮುಂದಿನ ದಿನಗಳಲ್ಲಿ ಉಪ್ಪಿ, ಶಿವಣ್ಣನ ಮಾತನ್ನ ಸೀರಿಯಸ್ಸಾಗಿ ತಗೊಂಡು ಇಂತದ್ದೊಂದು ಸಿನಿಮಾ ಮಾಡಿದ್ರೂ ಅಚ್ಚರಿಯಿಲ್ಲ. ಉಪ್ಪಿ ಶಿವಣ್ಣ ಯಾವ ಸಿನಿಮಾ ಮೂಲಕ ಒಂದಾಗ್ತಾರೆ ಅಂತ ಕಾದು ಕುಳಿತಿದ್ದಾರೆ ಅಭಿಮಾನಿಗಳು.

 

ಸದ್ಯ ಶಿವಣ್ಣ ಮತ್ತು ಅಪ್ಪು, ಶಿವಣ್ಣ ಮತ್ತು ದಚ್ಚು, ಶಿವಣ್ಣ ಮತ್ತು ಉಪ್ಪಿ ಈ ಮೂರು ಕಾಂಬಿನೇಷನ್​ಗಳ ಬಗ್ಗೆ ಸಿನಿ ಅಭಿಮಾನಿಗಳು ಕಾತುರದಿಂದ ಕಾಯ್ತಿರೋದಂತೂ ಸುಳ್ಳಲ್ಲ. ಆದಷ್ಟು ಬೇಗ ಈ ಮೂರು ಕಾಂಬಿನೇಷನ್​ಗಳ ಸಿನಿಮಾ ಬಂದು, ಚಿತ್ರರಂಗದಲ್ಲಿ ಮತ್ತೊಂದಷ್ಟು ದಾಖಲೆ ಬರಿಲಿ ಅನ್ನೋದೇ ಫ್ಯಾನ್ಸ್​ ಆಶಯ.

 

మరింత సమాచారం తెలుసుకోండి: