ಡಿ.ಸಿ.ತಮ್ಮಣ್ಣ ವಿವಾದಾತ್ಮಕ ಹೇಳಿಕೆಯಿಂದ ಜೆಡಿಎಸ್  ಬಹಳಷ್ಟು ಇಕ್ಕಟ್ಟಿಗೆ ಸಿಲುಕದೆ. ಹೀಗಾಗಿ ಇದೀಗ ಮುಖ್ಯಮಂತ್ರಿ ಸ್ವತಃ ಡಿ.ಸಿ.ತಮ್ಮಣ್ಣ ಅವರಿಗೆ ಬುದ್ದಿ ಮಾತುಗಳನ್ನು ಹೇಳಿದ್ದಾರೆ. ಟ್ವೀರತ ನಲ್ಲಿ ಈ ಕುರಿತು ಕುಮಾರಸ್ವಾಮಿ ಬರೆದಿದ್ದು ಏನು ಅನ್ನೋದು ಇಲ್ಲಿದೆ ನೋಡಿ.

 

 

ಇತ್ತೀಚೆಗೆ ಡಿ.ಸಿ. ತಮ್ಮಣ್ಣ ಅವರು ಅಭಿವೃದ್ಧಿಗೆ ನಾವು,ಮತಹಾಕಲಿಕ್ಕೆ ಅವರು ಎಂದು ಜನರ ವಿರುದ್ಧ ಹರಿಹಾಯ್ದಿದ್ದರು. ಈ ಕುರಿತು ರಾಜ್ಯದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಕುಮಾರಸ್ವಾಮಿ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬುದ್ದಿ ಹೇಳಿದ್ದಾರೆ.

 

ಚುನಾವಣೆ ರಾಜಕೀಯವನ್ನು ಅಭಿವೃದ್ಧಿ ಜೊತೆಗೆ ಬೆರೆಸುವುದು ಸೂಕ್ತ ಅಲ್ಲ. ಜನಪ್ರತಿನಿಧಿಗಳು ಹಾಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದವರು ನಾವು ಪಕ್ಷಾತೀತವಾಗಿ ಕೆಲಸ ಮಾಡಬೇಕು. ರಾಜಕೀಯ ಒಲವು ಪರಿಗಣಿಸದೇ ಒಟ್ಟಾರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ. ಇದೇ ಪ್ರಜಾಪ್ರಭುತ್ವ ತತ್ವದ ಸಾರ ಎಂದು ಬುದ್ದಿ ಮಾತು ಹೇಳಿದ್ದಾರೆ. 

 

మరింత సమాచారం తెలుసుకోండి: