ನವದೆಹಲಿ: ಕೊರೋನಾ ಸೋಂಕು ವಿಶ್ವದ ಎಲ್ಲಾ ದೇಶಗಳನ್ನು ವ್ಯಾಪಿಸಿ ತನ್ನ ಪ್ರತಾಪವನ್ನು ತೋರಿ ಸಾಕಷ್ಟು ಸಾಕಷ್ಟು ಜನರ ಪ್ರಾಣ ಹಾನಿಗೆ ಕಾರಣವಾಗಿದ್ದ ಕರೋನಾ ವೈರಸ್. ವಿಶ್ವದ ದೊಡ್ಡದೊಡ್ಡ ದೇಶವನ್ನು ನಲುಗುವಂತೆ ಮಾಡಿದೆ ಈ ಸಂದರ್ಭದಲ್ಲಿ ಸಂಶೋಧಕರು ಮೇರಿಯಾಗೆ ಬಳಸುತ್ತಿದ್ದ ಔಷಧಿಯನ್ನೇ ಕೊರೋನಾ ತಡೆಗೆ ಬಳಸಬಹುದು ಎಂದು ತಿಳಿಸಿದ್ದರು. ಈ ಔಷಧಿಯನ್ನು ಹೆಚ್ಚಾಗಿ ತಯಾರಿಸುತ್ತಿದ್ದ ಭಾರತವನ್ನು ಅಮೇರಿಕಾಕ್ಕೆ ಮಲೇರಿಯಾ ಔಷಧಿಯನ್ನು ರಪ್ತು ಮಾಡಬೇಕೆಂದು ಒತ್ತಾಯ ಮಾಡುವುದರ ಜೊತೆಗೆ ಎಚ್ಚರಿಕೆಯನ್ನೂ ಕೂಡ ಮಾಡಲಾಗಿತ್ತು ಇದಕ್ಕೆ ಭಾರತದ ಕೇಂದ್ರ ಸರ್ಕಾರ ತಕ್ಕ ಉತ್ತರವನ್ನು ನೀಡಿದೆ ಅಷ್ಟಕ್ಕೂ ಭಾರತ ಕೊಟ್ಟ ಉತ್ತರ ಏನು ಗೊತ್ತಾ?

 

ಮಲೇರಿಯಾ ರೋಗಿಗಳಿಗೆ ನೀಡಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧವನ್ನೇ ಕೊರೋನಾ ಸೋಂಕಿತರ ಚಿಕಿತ್ಸೆಗೂ ಬಳಸಬಹುದು ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ. ಈ ಔಷಧವನ್ನು ಅತಿಹೆಚ್ಚು ಉತ್ಪಾದಿಸುವ ದೇಶವಾಗಿರುವ ಭಾರತದಿಂದ ತಮ್ಮ ದೇಶಕ್ಕೆ ಔಷಧವನ್ನು ರಫ್ತು ಮಾಡಬೇಕೆಂದು ಅಮೆರಿಕ ಸೇರಿದಂತೆ 30 ದೇಶಗಳು ಒತ್ತಡ ಹೇರಿದ್ದರು. ಆ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಕೊರೋನಾ ದಾಳಿಗೆ ಅತಿಹೆಚ್ಚು ನಲುಗಿರುವ ದೇಶಗಳಿಗೆ ಮಾತ್ರ ಹೈಡ್ರಾಕ್ಸಿಕ್ಲೋರೋಕ್ವಿನ್ ಸರಬರಾಜು ಮಾಡುವುದಾಗಿ ತಿಳಿಸಿದೆ.

 

ಕೊರೋನಾ ನಿಯಂತ್ರಣಕ್ಕೆ ಸಂಶೋಧಕರು ಶಿಫಾರಸು ಮಾಡಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗೆ ಬೇರೆ ದೇಶಗಳಿಂದಲೂ ಬೇಡಿಕೆ ಹೆಚ್ಚಾಗಿದೆ. ಸ್ವತಃ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ತಮ್ಮ ದೇಶಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ರಫ್ತು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿದ್ದರು. ಒಂದುವೇಳೆ ಈ ಔಷಧಿಯ ರಫ್ತಿನ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸದಿದ್ದರೆ ಅದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಲಿದೆ, ಇದಕ್ಕೆ ಪ್ರತಿದಾಳಿಯನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ರವಾನಿಸಿದ್ದರು.

 

ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಯಾವುದೇ ಒಂದು ಜವಾಬ್ದಾರಿಯುತ ಸರ್ಕಾರದಂತೆ ಭಾರತ ಕೂಡ ಹೈಡ್ರಾಕ್ಸಿಕ್ಲೋರೋಕ್ವಿನ್ ಅಗತ್ಯವಿರುವ ದೇಶಗಳಿಗೆ ಈ ಔಷಧವನ್ನು ರಫ್ತು ಮಾಡಲು ನಿರ್ಧರಿಸಿದೆ. ಕೆಲವು ದೇಶಗಳಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮಿತಿಮೀರುತ್ತಿದೆ. ಅಂತಹ ದೇಶಗಳಿಗೆ ಭಾರತ ಸಹಾಯಹಸ್ತ ಚಾಚಲಿದೆ ಎಂದು ಪ್ರಧಾನಿ ಮೋದಿ ಇಂದು ಸ್ಪಷ್ಟಪಡಿಸಿದ್ದಾರೆ.

 

ಇಡೀ ವಿಶ್ವವನ್ನೇ ಕಂಗಾಲಾಗಿಸಿರುವ ಕೊರೋನಾಗೆ ಇನ್ನೂ ಯಾವುದೇ ಔಷಧ ಪತ್ತೆಯಾಗಿಲ್ಲ. ವಿಶ್ವಾದ್ಯಂತ ಸುಮಾರು 74ಸಾವಿರ ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲೂ ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ಮಲೇರಿಯಾಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನೇ ಕೊರೋನಾ ವೈರಸ್ ತಡೆಗಟ್ಟಲು ಬಳಸಬಹುದು ಎಂದು ಸಂಶೋಧಕರು ಹೇಳಿದ್ದರು. ಭಾರತದಲ್ಲಿ ಹೆಚ್ಚಾಗಿ ಉತ್ಪಾದನೆಯಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್ ಕೊರೋನಾಗೆ ರಾಮಬಾಣವಾಗಬಲ್ಲದು ಎಂದು ತಿಳಿದಿದ್ದೇ ತಡ ಈ ಔಷಧಿಯನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರ ಮಾ. 25 ರಂದು ನಿಷೇಧ ಹೇರಿತ್ತು.

 

 

మరింత సమాచారం తెలుసుకోండి: