ಕೊರೊನಾ ವೈರಸ್ ಅನ್ನು ತನ್ನ ಮಡಿಲಿನಿಂದ ಇಡೀ ವಿಶ್ವದ ಎಲ್ಲಾ ದೇಶಗಳಿಗೆ ಹರಡಿ ಶಾಂತಿ ನೆಮ್ಮದಿಯನ್ನು ಹಾಳುಮಾಡಿ ಅಸಂಖ್ಯಾತ ಜನರನ್ನು ಬಲಿತೆಗೆದು ಕೊಂಡು ಸಾಕಷ್ಟು ಜನರನ್ನು ನರಳುವಂತೆ ಮಾಡಿ, ಉಳಿತವರನ್ನು ಆತಂಕದ ಬೆಂಕಿಯಲ್ಲಿ ಬೇಯುವಂತೆ ಮಾಡಿದ ವುಹಾಂಗ್ ಈಗ ತನ್ನ ಸಹಜ ಸ್ಥಿತಿಗೆ ತಲುಪಿದೆ.

 

ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕರೊನಾ COVID -19ವೈರಸ್ ಸೋಂಕು ಉಗಮವಾಗಿದ್ದ ಚೀನಾದ ವುಹಾನ್ ಮತ್ತೆ ಸಹಜ ಜೀವನದತ್ತ ಸಾಗಿದೆ. ೭೬ ದಿನಗಳ ಲಾಕ್ಡೌನ್ ಅವಧಿ ಪೂರೈಸಿರುವ ಅಲ್ಲಿ ಈಗ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಹನ್ನೊಂದು ವಾರಗಳ ಬಳಿಕ ಇದೇ ಮೊದಲ ಬಾರಿಗೆ ಅಲ್ಲಿಂದ ರೈಲೊಂದು ಬುಧವಾರ ಬೆಳಗ್ಗೆ ಪ್ರಯಾಣ ಆರಂಭಿಸಿದೆ.

 

ಹಿಂದೆಂದೂ ಕಂಡಿರದಂತಹ ಲಾಕ್ಡೌನ್ಗೆ ಮಾದರಿಯಾಗಿ ಈ ವೈರಸ್ನ ಉಗಮ ಸ್ಥಾನ ವುಹಾನ್ ಗೋಚರಿಸಿದ್ದು, ಸೋಂಕುಪೀಡಿತ ರಾಷ್ಟ್ರಗಳೆಲ್ಲವೂ ವುಹಾನ್ ಮಾದರಿಯ ಲಾಕ್ಡೌನ್ ನಡೆಸುತ್ತಿವೆ. ಈಗ ವುಹಾನ್ ನಲ್ಲಿ ಬಹುತೇಕ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಹುಬೈನ ಪ್ರಾಂತೀಯ ರಾಜಧಾನಿಯಲ್ಲೀಗ ಮತ್ತೊಂದು ಪ್ರಯೋಗ ಆರಂಭವಾಗಿದ್ದು, ವಾಣಿಜ್ಯ ಚಟುವಟಿಕೆ ಮತ್ತೆ ಎಂದಿನಂತೆ ಶುರುವಾಗಿದೆ. ಹೊಸ ಸೋಂಕಿನ ಪ್ರಕರಣಗಳು ಕಡಿಮೆಯಾದ ಕಾರಣ ಇಲ್ಲಿ ಈಗ ಈ ಸಾಹಸಕ್ಕೆ ಸರ್ಕಾರ ಮುಂದಾಗಿದೆ.

 

ಬುಧವಾರ ನಸುಕಿನಿಂದ ಜನರ ಓಡಾಟಕ್ಕೆ ಅನುವುಮಾಡಿಕೊಡಲಾಗಿದೆ. ಎಲ್ಲರ ಸ್ಮಾರ್ಟ್ಫೋನ್ನಲ್ಲಿ ಸರ್ಕಾರ ಕಡ್ಡಾಯವಾಗಿ ಆಯಪ್ ಅಳವಡಸಿದ್ದು ಅದರ ಮೂಲಕವೇ ಎಲ್ಲರ ಮೇಲೂ ಅದು ನಿಗಾವಹಿಸಿದೆ. ಇದು ಡೇಟಾ ಟ್ರ್ಯಾಕಿಂಗ್ ಅಷ್ಟೇ ಅಲ್ಲ, ಸರ್ಕಾರದ ಸೂಚನೆಗಳನ್ನೂ ಜನರಿಗೆ ನೇರವಾಗಿ ತಲುಪಿಸುತ್ತಿದೆ.

 

ಅಲ್ಲಿನ ಯಾಂಗ್ಟ್ಜೆ ನದಿ ತಟದಲ್ಲಿ ದೀಪ ಬೆಳಗುವ ಮೂಲಕ ಮತ್ತು ಗಗನಚುಂಬಿ ಕಟ್ಟಡಗಳು, ಸೇತುವೆಗಳ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಯ ಆಯನಿಮೇಟೆಡ್ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಲಾಕ್ಡೌನ್ ನಿರ್ಬಂಧ ಸಡಿಲಿಕೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ವುಹಾನ್ನ ಪ್ರೆಸಿಡೆಂಟ್ ಹೀರೋಯಿಕ್ ಸಿಟಿ ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದು, ಚೀನಾ ಮುಖ್ಯಸ್ಥ ಕ್ಸಿ ಜಿನ್ಪಿಂಗ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲಿ ನೆರೆದ ಜನರು ಧ್ವಜವನ್ನು ಹಾರಾಡಿಸುತ್ತ ವುಹಾನ್ ಲೆಟ್ ಅಸ್ ಗೋ ಎಂದು ಘೋಷಣೆ ಕೂಗಿ ಚೀನಾದ ರಾಷ್ಟ್ರಗೀತೆಯನ್ನು ಹಾಡಿದರು.

 

ಬಹುತೇಕ ಎಲ್ಲರೂ ೭೬ ದಿನಗಳ ಬಳಿಕ ಹೊರ ಜಗತ್ತು ನೋಡುತ್ತಿರುವ ಕಾರಣ, ಕುತೂಹಲಭರಿತರಾಗಿದ್ದಾರೆ. ಏನೇನು ಬದಲಾವಣೆಗಳಾಗಿವೆ ಎಂಬ ಕುತೂಹಲ ಒಂದೆಡೆ, ಏನೇನೋ ಮಾಡಬೇಕೆಂಬ ತವಕ, ಹೀಗೆ ಒಬ್ಬಬ್ಬರದ್ದೂ ಒಂದೊಂದು ಪ್ರತಿಕ್ರಿಯೆ. ಹೊಸ ಬದುಕು ಕಾಣಲು ಅವರೆಲ್ಲ ಸಜ್ಜಾಗಿದ್ದಾರೆ.

 

 

 

 

మరింత సమాచారం తెలుసుకోండి: