ಕೊರೋನಾ ವೈರಸ್  ಇಡೀ ವಿಶ್ವ ವನ್ನು ವ್ಯಾಪಿಸಿ ಇಡೀ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದೆ.  ಹಾಘೂ ದಿನದಿಂದ ದಿನಕ್ಕೆ ಎಲ್ಲಾ ದೇಶದಲ್ಲೂ ಕೂಡ ಸೊಂಕು ಹೆಚ್ಚಾಗುತ್ತಲೇ ಇದೆ. ಈಗ ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರು ಎಷ್ಟು ಮಂದಿ ಗೊತ್ತಾ ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.

 

ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ಸೋಂಕು ಜನರನ್ನೇ ತನ್ನ ಹಿಡಿಮುಷ್ಠಿಯಲ್ಲೇ ಹಿಡಿದುಕೊಂಡಿದ್ದರೂ ವಿಶ್ವಸಂಸ್ಥೆಯ ಪ್ರಕಾರ 213 ದೇಶಗಳ ಪೈಕಿ 31 ರಾಷ್ಟ್ರಗಳಲ್ಲಿ ಒಂದು ಸಾವು ಕೂಡ ಸಂಭವಿಸಿಲ್ಲ. ಸೋಂಕು ಬಾಧಿಸುತ್ತಿರುವ ಉಳಿದ 186 ರಾಷ್ಟ್ರಗಳಲ್ಲಿ ಶುಕ್ರವಾರ ಬೆಳಗಿನಜಾವದವರೆಗೆ ಒಟ್ಟು 3.34 ಲಕ್ಷ ಮಂದಿ ಮೃತಪಟ್ಟಿದ್ದಾರೆ.

 

ಈ ಸೋಂಕು ಬಾಧಿಸುತ್ತಿರುವ ರಾಷ್ಟ್ರಗಳಲ್ಲಿ ಅತಿಹೆಚ್ಚು ಜನರು ಸಾವನ್ನಪ್ಪಿರುವ ರಾಷ್ಟ್ರವೆಂದರೆ ಅಮೆರಿಕಾ. ವಿಶ್ವದಲ್ಲಿಯೇ ತನ್ನ ಪ್ರಭಾವವನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅಮೆರಿಕಾ ದೊಡ್ಡಣ್ಣ ಎಂದು ಕರೆಸಿಕೊಂಡರೂ ಈ ರಾಷ್ಟ್ರದಲ್ಲಿ ವಾಸವಿರುವ ಜನರು ಕೊರೊನಾದಿಂದ ತತ್ತರಿಸಿ ಹೋಗಿದ್ದಾರೆ. ಅಮೆರಿಕಾದಲ್ಲಿ ಇಲ್ಲಿಯವರೆಗೆ ಒಟ್ಟು 96.35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 33.07 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಜನರು ಕೊರೊನಾ ಭೀತಿಯಿಂದಾಗಿ ನಲುಗಿ ಹೋಗಿದ್ದಾರೆ.

: Covid-19 World Update: ಸೋಂಕಿತರ ಸಂಖ್ಯೆ 50 ಲಕ್ಷ, 3 ಲಕ್ಷ ಸಾವು

 

ಇದುವರೆಗೆ ವಿಶ್ವದಲ್ಲಿ 51.94 ಲಕ್ಷ ಮಂದಿಯನ್ನು ಈ ಸೋಂಕು ಕಾಡುತ್ತಲಿದೆ. ವೈದ್ಯರ ಚಿಕಿತ್ಸೆ, ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಾಗಿ 20.08 ಲಕ್ಷ ಮಂದಿ ಈ ರೋಗದಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ವಿಶ್ವದಲ್ಲಿ 27.78 ಲಕ್ಷ ಮಂದಿ ವಿವಿಧ ಆಸ್ಪತ್ರೆ ಹಾಗೂ ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಪ್ರಕರಣಗಳೂ( 334,616 ಲಕ್ಷ) ಹಾಗೂ ಗುಣಮುಖರಾದವರನ್ನೂ(2,080,923) ಸೇರಿ ಒಟ್ಟು 2,415,539 ಪ್ರಕರಣಗಳನ್ನು ಮುಕ್ತಾಯಗೊಳಿಸಿದ ಪ್ರಕರಣಗಳೆಂದು ಪರಿಗಣಿಸಲಾಗಿದೆ.

 

ಭಾರತದಲ್ಲಿ ಇಲ್ಲಿಯವರೆಗೆ 118,226 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 3,584 ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್‌ನಲ್ಲಿ 250,908 ಮಂದಿಗೆ ಸೋಂಕು ತಗುಲಿದ್ದು, 36,042 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 228,006 ಮಂದಿಗೆ ಈ ಸೋಂಕು ದೃಢಪಟ್ಟಿದ್ದು, 32,486 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌ನಲ್ಲಿ 280,117 ಮಂದಿಗೆ ಈ ಸೋಂಕು ತಗುಲಿದ್ದು, 27,940 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ 48,091 ಜನರಲ್ಲಿ ಈ ಸೋಂಕು ದೃಢಪಟ್ಟಿದ್ದು, 1,017 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ ರಾತ್ರಿ ವಿಶ್ವದಲ್ಲಿಯೇ ಅತಿಹೆಚ್ಚು ಅಂದರೆ 2,973 ಹೊಸ ಪ್ರಕರಣಗಳು ಮೆಕ್ಸಿಕೋದಲ್ಲಿ ದಾಖಲಾಗಿದ್ದು, ಇದೇ ದೇಶದಲ್ಲಿ 420 ಮಂದಿ ಸಾವನ್ನಪ್ಪಿದ್ದಾರೆ. ಅತಿ ಕಡಿಮೆ ಪ್ರಕರಣಗಳೆಂದರೆ ಜಮೈಖಾದಲ್ಲಿ ಕಾಣಿಸಿಕೊಂಡಿದ್ದು, 5 ಹೊಸ ಪ್ರಕರಣಗಳು ಈ ರಾಷ್ಟ್ರದಲ್ಲಿ ದಾಖಲಾಗಿವೆ. ವಿಶ್ವದಲ್ಲಿ ಕಳೆದ ರಾತ್ರಿ 3,603 ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, 443 ಮಂದಿ ಮೃತಪಟ್ಟಿದ್ದಾರೆ.

 

మరింత సమాచారం తెలుసుకోండి: