ಮಂಡ್ಯ ಲೋಕಸಭಾ ಕ್ಷೇತ್ರ ನಿಜಕ್ಕೂ ರಾಜ್ಯದ ಗಮನ ಸೆಳೆದಿತ್ತು. ಅದರಲ್ಲೂ ಸುಮಲತಾ ಅಂಬರೀಶ್ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಕಣದಲ್ಲಿರೋದು ಮಾಧ್ಯಮ ಇಂಟರೆಸ್ಟಿಂಗ್ ವಿಷಯವಾಗಿತ್ತು. ಹೀಗಾಗಿ ಅಗತ್ಯಕ್ಕಿಂತ ಹೆಚ್ಚಾಗಿ ಮಾಧ್ಯಮಗಳು ಮಂಡ್ಯ ಕ್ಷೇತ್ರದ ಮೇಲೆ ಹೆಚ್ಚು ಫೋಕಸ್ ಮಾಡಿದರು. ಹೀಗಾಗಿ ಇದು ಸುಮಲತಾ ಅವರಿಗೆ ವರವಾಗಿ ಪರಿಣಮಿಸಿದೆ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ.

ಮಂಡ್ಯದಲ್ಲಿ ಜಯಬೇರಿ ಬಾರಿಸಿದ ನಂತರ ಮಾತನಾಡಿದ ಸುಮಲತಾ ಅಂಬರೀಶ್ ಅವರು, ಮಂಡ್ಯದ ಜನತೆ ಮೋಸಕ್ಕೆ ಹಣಕ್ಕೆ ಬಲಿಯಾಗದೇ ಪ್ರೀತಿಗೆ ತಲೆ ಬಾಗಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ತಮ್ಮ ಗೆಲುವಿಗಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ. ನೆಗೆಟಿವ್ ರಾಜಕಾರಣಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ ನಾನು ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೇಳಿದ್ದೆ. ಆದರೆ ಕಾಂಗ್ರೆಸ ನವರು ನನಗೆ ಟಿಕೇಟ್ ನೀಡಲು ನಿರಾಕರಿಸಿದರು. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದೆ. ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸರಿಯಾಗಿ ಪ್ರತ್ಯುತ್ತರ ನೀಡಿದಂತಾಯ್ತು. ಅಲ್ಲದೇ ನನ್ನ ಗೆಲುವು ನಿಜಕ್ಕೂ ಅವರನ್ನು ದಂಗು ಬಡಿಸಿದೆ ಎಂದು ಸುಮಲತಾ ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. 

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಚುನಾವಣೆಗೆ ನಿಂತ ಕೂಡಲೇ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡಿತ್ತು ಅಲ್ಲದೇ ಸ್ವತಃ ನರೇಂದ್ರ ಮೋದಿಯವರೇ ಸುಮಲತಾ ಅವರನ್ನು ಗೆಲ್ಲಿಸಿ ಎಂದು ಜನರಿಗೆ ಕರೆ ನೀಡಿದ್ದರು. ಅವರ ಒಂದು ಕರೆ ನಿಜಕ್ಕೂ ಸುಮಲತಾ ಅವರ ಗೆಲವಿಗೆ ಮತ್ತಷ್ಟಿ ಪುಷ್ಟಿ ನೀಡಿತು. ಇದೀಗ ಸುಮಲತಾ ಅವರು ಬಿಜೆಪಿ ಸೇರುತ್ತಾರೋ ಇಲ್ಲವೋ ಅನ್ನೋದನ್ನು ಕಾದು ನೋಡಬೇಕಿದೆ. 


మరింత సమాచారం తెలుసుకోండి: