ಬೆಂಗಳೂರು: ಇಲ್ಲಿದೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಅದು ಯಾರಿಂದ ಗೊತ್ತಾ?. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೂ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. yes, ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯಕ್ತ ಕೆಎಸ್​​​ಆರ್​​ಟಿಸಿ ವಿಶೇಷ ಪ್ಯಾಕೇಜ್​​ ಘೋಷಿಸಿದೆ. ಮಲ್ಲಿಗೆ ನಗರಿ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ಬರುವ ಜನರಿಗೆ ವಿಶೇಷ ಟೂರ್​​ ಪ್ಯಾಕೇಜ್​​ ಲಭ್ಯವಾಗಿದೆ. ಹಾಗಾಗಿ ಪ್ರಯಾಣಿಕರು ಕೆಎಸ್​​ಆರ್​​ಟಿಸಿ ಈ ಟೂರ್​​ ಪ್ಯಾಕೇಜ್​​ ಬಳಸಿಕೊಂಡು ಇಡೀ ಮೈಸುರು ಜೊತೆಗೆ ಸುತ್ತಲಿನ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.


ಮೈಸೂರು ದಸರಾ ಪ್ರಯುಕ್ತ ಜನರಿಗಾಗಿ ಈ ಪ್ಯಾಕೇಜ್​​ ಘೋಷಿಸಿದ್ದೇವೆ. ಇದೇ ಸೆಪ್ಟೆಂಬರ್​​​ 29ರಿಂದ ಮುಂದಿನ ಅಕ್ಟೋಬರ್ 13ರವರೆಗೂ ಈ ಪ್ಯಾಕೇಜ್‌ ಇರಲಿದೆ. ಪ್ರವಾಸಿಗರು ಈ ಪ್ಯಾಕೇಜ್​​ ಮೂಲಕ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ವಯಸ್ಕರಿಗೆ, ಹಿರಿಯ ವಯಸ್ಸಿನವರಿಗೆ, ಮಕ್ಕಳಿಗೆ ಪ್ಯಾಕೇಜ್​ನಲ್ಲಿ ಪ್ರತ್ಯೇಕ ದರ ನಿಗದಿ ಮಾಡಿದೆ ಎಂದು ಕೆಎಸ್​​ಆರ್​​ಟಿಸಿ ತಿಳಿಸಿದೆ. 


ಕೆಎಸ್​​ಆರ್​ಟಿಸಿ ಸಾಮಾನ್ಯ ಬಸ್​​ನಿಂದ ಹಿಡಿದು ಐರಾವತ ಕ್ಲಬ್ ಕ್ಲಾಸ್ ವಾಹನಗಳ ಪ್ಯಾಕೇಜ್​​ ಕೂಡ ಇದೆ. ಒಂದು ದಿನದ ಪ್ಯಾಕೇಜ್​​ ಇದಾಗಿದ್ದ, ನಾವು ತೆಗೆದುಕೊಳ್ಳುವ ಪ್ಯಾಕೇಜ್​​​ ಮೇಲೆ ಹಣ ನೀಡಬೇಕಾಗುತ್ತದೆ.ಇನ್ನು ಗಿರಿ ದರ್ಶಿನಿ, ಜಲ ದರ್ಶಿನಿ, ದೇವ ದರ್ಶಿನಿ ಎಂಬ ಮೂರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ. ಪ್ರವಾಸಿಗರು ಈ ಪ್ಯಾಕೇಜ್‌ಗಳ ಮೂಲಕ ವಿವಿಧ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ಪ್ರತಿ ವರ್ಷದಂತೆಯೇ ಈ ಬಾರಿಯೂ ದಸರಾ ಪ್ರಯುಕ್ತ ಘೋಷಿಸಿರುವ ಪ್ಯಾಕೇಜ್​​ಗಳು ಉತ್ತಮವಾಗಿವೆ.


ನಾಡಹಬ್ಬ ದಸರಾಗೆ ಮೈಸೂರು ತೆರೆದುಕೊಳ್ಳುತ್ತಿದೆ. ಈಗಾಗಲೇ ಹಲವು ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಯುವ ಸಂಭ್ರಮದ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಬಾರಿಯ ದಸರಾ ಮಹೋತ್ಸವದ ಪ್ರಯುಕ್ತ ಯುವ ಸಂಭ್ರಮವು ಸೆ.17ರಿಂದ 26ರವರೆಗೆ ಒಟ್ಟು ಹತ್ತು ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ.


మరింత సమాచారం తెలుసుకోండి: