ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ದೆಹಲಿಗೆ ಕರೆಸಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲ್ಲದೇ ಇದು ಸಿದ್ದರಾಮಯ್ಯ ಅವರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅಡೆತಡೆ ತರುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ವಿರೋಧ ಪಕ್ಷದ ನಾಯಕ ಆಗ್ತಾರೆ ಅನ್ನೋದಕ್ಕೆ ಇದೀಗ ಅನುಮಾನಗಳು ಕಾಡುತ್ತಿವೆ. 


ಹೌದು ಡಾ.ಜಿ ಪರಮೇಶ್ವರ್ ಅವರು ದೆಹಲಿಗೆ ತೆರಳಿ ಹೈಮಾಂಡ್ ಜೊತೆಗೆ ಮಾತನಾಡಿದ್ದಾರೆ. ಅಲ್ಲದೇ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳೋಕೆ ಸಿದ್ದರಾಮಮಯ್ಯ ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ಹೇಳಿದ್ದಾರೆ ಎನ್ನುತ್ತಿವೆ ಮೂಲಗಳು. ಇದೇ ಕಾರಣಕ್ಕೆ ಬಿಜೆಪಿಗೆ ಅಧಿಕಾರ ದೊರೆಯುವಂತೆ ಆಯಿತು ಎಂದು ಪರಮೇಶ್ವರ್ ಅವರು ದೆಹಲಿಯ ಹೈಮಾಂಡ್ ಗೆ ದೂರು ನೀಡಿದ್ದಾರೆ.


ಆದರೆ ಈಗಾಗಲೇ ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು ಎಂದು ಬಹಳಷ್ಟು ಮಂದಿ ಶಾಸಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಸಭೆಗೆ ಗೈರಾಗಿದ್ದ ಪರಮೇಶ್ವರ್ ಅವರು ದೆಹಲಿಗೆ ತೆರಳಿ ಅಲ್ಲಿನ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಇದು ಸಿದ್ದು ಕನಸಿಗೆ ಕೊಳ್ಳಿ ಇಡುವ ನಡೆ ಎನ್ನಲಾಗುತ್ತಿದೆ.


ಇನ್ನು ಸಿದ್ದರಾಮಯ್ಯ ಅವರನ್ನು ಬಿಟ್ಟರೆ, ವಿರೋಧ ಪಕ್ಷದ ನಾಯಕನ ಸ್ಥಾನದ ರೇಸಿನಲ್ಲಿ ಪರಮೇಶ್ವರ್, ರಮೇಶ್‍ಕುಮಾರ್, ಎಚ್.ಕೆ.ಪಾಟೀಲ್, ಕೃಷ್ಣಭೈರೇಗೌಡ ಸೇರಿದಂತೆ ಹಲವಾರು ನಾಯಕರ ಹೆಸರುಗಳಿವೆ.  ಹೀಗಾಗಿ ಸಿದ್ದರಾಮಯ್ಯ ಅವರಿಗೆ ಪರಂ ಅವರೇ ವಿಲನ್ ಆಗಿ ಕಾಡಬಹುದು ಎನ್ನಲಾಗುತ್ತಿದೆ.  ಹೀಗಾಗಿ ಸಿದ್ದರಾಯ್ಯ ಅವರನ್ನು ಈ ರೇಸ್ ನಿಂದ ಹೊರಗಿಟ್ಟರೆ ಬೇರೆ ಯಾರಾದರೂ ಇದನ್ನು ಅಲಂಕರಿಸುವ ಸಾಧ್ಯತೆ ಇದೆ.


ಪರಮೇಶ್ವರ್ ಅವರು ಸಮ್ಮಿಶ್ರ ಸರ್ಕಾರ ಬಿದ್ದ ಮೇಲೆ ತಮ್ಮ ಅಧಿಕಾರ ಕಳೆದುಕೊಂಡರು. ಹೀಗೆ ಕಳೆದುಕೊಂಡ ನಂತರ ಪಕ್ಷದ ಚಟುವಟಿಕೆಗಳಿಂದ ಅವರು ದೂರ ಉಳಿದಿದ್ದರು. ನಂತರ ತಮ್ಮ ಶಿಕ್ಷಣ ಸಂಸ್ಥೆಯತ್ತ ಹೆಚ್ಚಿನ ಗಮನ ಹರಿಸಿದ್ದರು. ಆದರೆ ಇದೀಗ ಮತ್ತೆ ರಾಜ್ಯ ರಾಜಕೀಯದಲ್ಲಿ ಮೂಲಕಾಂಗ್ರೆಸ್ಸಿಗರಿಗೆ ವಿಪಕ್ಷ ನಾಯಕನ ಸ್ಥಾನ ನೀಡಬೇಕೆಂದು ಒತ್ತಡ ಹೆಚ್ಚಾಗಿರುವುದರಿಂದ ಯಾರಿಗೆ ವಿಪಕ್ಷ ಸ್ಥಾನ ಒಲಿಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.


మరింత సమాచారం తెలుసుకోండి: