ಸ್ವಾತಂತ್ರ್ಯ ಸಿಕ್ಕು 73 ವರ್ಷಗಳು ಕಳೆದರು ಸಹ ಅಭಿವೃದ್ಧಿಯಲ್ಲಿ ಮರಿಚಿಕೆಯಾದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಇದೀಗ ಸಚಿವ ಬಿ.ಶ್ರೀರಾಮುಲು ಅವರಿಂದ ಬಳಕಿಗೆ ಬಂದಿದೆ. ಸುಮಾರು 60 ವರ್ಷಗಳಾದರೂ ಸಹ ಒಂದೇ ಒಂದು ಸಚಿವ ಸ್ಥಾನ ಸಿಗದ ನತದೃಷ್ಠ ತಾಲ್ಲೂಕ್ ಇದು. ಇಲ್ಲಿಯ ಜನರಿಗೆ ಅಭಿವೃದ್ಧಿಯೆಂದರೆ ಏನು? ಎಂಬುದು ತಿಳಿದೇ ಇಲ್ಲ. ಶಾಸಕರು ತಮ್ಮ ಶಾಸಕ ನಿಧಿಯಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದ್ದಾರೆಯೇ ಹೊರತು ಒಬ್ಬರೂ ಸಹ ಸಚಿವ ಸ್ಥಾನ ಪಡೆದು ಅಭಿವೃದ್ಧಿ ಪಡಿಸಲಿಲ್ಲ.


ಆದರೆ ಇದೀಗ ಬಿ.ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಇನ್ನಾದರೂ ಅಭಿವೃದ್ಧಿಯನ್ನು ಕಾಣಬಹುದಾ ಎಂಬುದು ಜನಸಾಮಾನ್ಯರ ಕನಸಾಗಿದೆ. ತಾಲ್ಲೂಕಿನಲ್ಲಿ ಸುಮಾರು ಕಳೆದ 20ವರ್ಷಗಳಿಂದಲೂ ಮಳೆಯ ಕೊರತೆ ಹೆಚ್ಚಿದೆ. ಜನಸಾಮಾನ್ಯರಿಗೆ ಕುಡಿಯುವ ನೀರು ಸಹ ಸಿಗದೇ ಪರದಾಡುವ ಸ್ಥಿತಿ. ಟ್ಯಾಂಕರ್‌ಗಳ ಮೂಲಕವೇ ನೀರನ್ನು ಸರಬರಾಜು ಮಾಡಬೇಕಾಗಿದೆ. ಇದರ ಜೊತೆಗೆ ಶೈಕ್ಷಣಿಕ ವಿಷಯಗಳಲ್ಲಿಯೂ ಸಹ ಸಾಕಷ್ಟು ಹಿಂದುಳಿದ ಪ್ರದೇಶವಾಗಿದೆ. ಅಲ್ಪಸ್ವಲ್ಪ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೆ ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗುತಿದ್ದಾರೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಂತಹ ಪ್ರದೇಶವಿದು. 


ಮೊದಲ ಬಾರಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ ಶ್ರೀರಾಮುಲು 50 ಸಾವಿರ ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ದಾಖಲಿಸಿದರು. ಆದ್ದರಿಂದ ಇಲ್ಲಿಯ ಜನರು ಅಭಿವೃದ್ಧಿಯ ಕನಸನ್ನು ಕಾಣುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸಚಿವ ಬಿ. ಶ್ರೀರಾಮುಲು ಅವರು ಕಳೆದ ಒಂದುವರೆ ವರ್ಷದಿಂದ ತಾಲ್ಲೂಕಿನಲ್ಲಿ ಜನಸಾಮಾನ್ಯರ ಕ್ಷಣ ಕಾರ್ಪಣ್ಯಗಳಿಗೆ ಕಿವಿಗೊಡುತ್ತಿದ್ದ, ಇನ್ನಾದರೂ ತಾಲ್ಲೂಕನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ನಾಂದಿ ಆಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಸ್ಥಾನ ಸಿಕ್ಕಿರುವುದು ಖುಷಿಯ ವಿಚಾರವಾಗಿದೆ.

ಇನ್ನಾದರೂ ಅಭಿವೃದ್ಧಿಯ ಕನಸನ್ನು ಸಚಿವ ಬಿ.ಶ್ರೀರಾಮುಲು ಅವರು ನನಸು ಮಾಡುತ್ತಾರಾ ಇಲ್ಲವಾ ಎಂಬುದು ಕಾದುನೋಡಬೇಕಾಗಿದೆ.


మరింత సమాచారం తెలుసుకోండి: