ಭಾರತದಲ್ಲಿ ನಡೆದಂತಹ ಸಾಕಷ್ಟು ಉತ್ಕತನದಲ್ಲಿ ಸಾಕಷ್ಟು ಶಿವ ಲಿಂಗಗಳು ಪತ್ತೆಯಾಗಿವೆ ಆದರೆ ಇವ್ಯಾವುದೂ ಕೂಡ ಆಚ್ಚರಿ ಎನಿಸಲಿಲ್ಲ ಆದರೆ ಭಾರತವನ್ನು ವರತು ಪಡಿಸಿ ಬೇರೆ ದೇಶವೊಂದರಲ್ಲಿ ಶಿವಲಿಂಗ ದೊರೆತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

 

ವಿಯೆಟ್ನಾಂನಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ. ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಉತ್ಖನನ ನಡೆಸುವಾಗ ಈ ವಿಶಿಷ್ಟ ಶಿವಲಿಗವನ್ನು ಭಾರತದ ಪುರಾತತ್ವ ಇಲಾಖೆ(ASI) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

 

ಮೈಸನ್ ಪ್ರದೇಶದ ಚಾಮ್ ದೇಗುಲಗಳ ಸಮೂಹದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಇಲ್ಲಿ ಅನೇಕ ಶಿಥಿಲವಾಸ್ಥೆ, ಪೂರ್ಣ ಹಾಳಾದ ದೇಗುಲಗಳ ಅವಶೇಷಗಳಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ತಾಣವನ್ನು ಕ್ರಿ.ಶ 4ನೇ ಶತಮಾನದಿಂದ 14ನೇ ಶತಮಾನದ ಅವಧಿಯಲ್ಲಿ ಚಂಪಾ ಅರಸರು ಆಳಿದ್ದರು ಎಂದು ತಿಳಿದು ಬಂದಿದೆ.

 

ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದಲ್ಲಿರುವ, ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿರುವ ಚಾಮ್ ದೇವಾಲಯ ಸಂಕೀರ್ಣವನ್ನು ಕ್ರಿ.ಶ 9 ನೇ ಶತಮಾನದಲ್ಲಿ ಎರಡನೇ ರಾಜ ಇಂದ್ರವರ್ಮ ನಿರ್ಮಿಸಿದ್ದ ಎನ್ನಲಾಗಿದೆ.

 

ಅದೇ ಪ್ರದೇಶದಲ್ಲಿ ಪ್ರಸಿದ್ಧ ಡಾಂಗ್ ಡುವಾಂಗ್ ಬೌದ್ಧ ಕೇಂದ್ರ ನಿರ್ಮಾಣಕ್ಕೂ ಆತ ಕಾರಣನಾಗಿದ್ದ ಎಂದು ಹೇಳಲಾಗಿದೆ.

ಭಾರತೀಯ ಪುರಾತತ್ವ ಇಲಾಖೆಯ ನಾಲ್ಕು ಸದಸ್ಯರ ತಂಡವು ದೇಗುಲಗಳನ್ನು ಪುನಾರಚಣೆ ಮಾಡುವ ನಾಲ್ಕನೇ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಈ ವರ್ಷದ ಕಾರ್ಯಾಚರಣೆ ವೇಳಾಪಟ್ಟಿ ಜನವರಿಯಿಂದ ಜೂನ್‌ವರೆಗೆ ನಡೆಯಲಿದೆ.

 

ಈ ಭಾಗದಲ್ಲಿ ಅನೇಕ ಶಿವಲಿಂಗಗಳಿದ್ದು, ಇಲ್ಲಿ ಶಿವನನ್ನು ಭದ್ರೇಶ್ವರ ಎಂಬ ಹೆಸರಿನಲ್ಲಿ ಆರಾಧಿಸಲಾಗುತ್ತಿತ್ತು. ಚಂಪಾ ಅರಸರಿಂದ ಇಲ್ಲಿ 70ಕ್ಕೂ ಅಧಿಕ ದೇಗುಲಗಳ ನಿರ್ಮಾಣವಾಗಿತ್ತು. ವಿಯೆಟ್ನಾಂ ಯುದ್ಧದ ವೇಳೆ ಅಮೆರಿಕದ ಬಾಂಬ್ ದಾಳಿಯಿಂದ ಅನೇಕ ದೇಗುಲಗಳು ನಾಶವಾಗಿವೆ.

 

ಭಾರತದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ, ಹಿಂದೂ ಧರ್ಮದ ಆರಾಧನೆಯಲ್ಲಿ ತೊಡಗಿದ್ದ ಚಂಪಾ ನಾಗರಿಕತೆ ಅಥವಾ ಚಾಮ್‌ ನಾಗರಿಕತೆಯು ಮಧ್ಯ ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೂ ಹಿಂದೆ ಉತ್ತುಂಗದಲ್ಲಿತ್ತು. ಇಂದ್ರಪುರ ಎಂಬುದು ಅದರ ರಾಜಧಾನಿಯಾಗಿತ್ತು ಎನ್ನಲಾಗಿದೆ. ಚಾಮ್‌ ನಾಗರಿಕತೆ ಕಾಲದಲ್ಲೇ ವಿಯೆಟ್ನಾಂನ ಮೈ ಸನ್‌ ಪ್ರದೇಶದಲ್ಲಿ ಚಾಮ್‌ ದೇಗುಲ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ‌

 

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ನಾಲ್ಕು ಋತುಗಳ ಕಾಲ ಇಲ್ಲಿ ಉತ್ಖನನ ನಡೆಸುತ್ತಿದ್ದಾರೆ. ಸದ್ಯ ಜನವರಿಯಿಂದ ಜೂನ್ ಅವಧಿಯ ಕಾರ್ಯ ನಡೆಯುತ್ತಿದ್ದು, ಎಎಸ್‌ಐ ತಂಡದಲ್ಲಿ ನಾಲ್ವರು ಅಧಿಕಾರಿಗಳಿದ್ದಾರೆ. ಒಟ್ಟು 6 ಶಿವಲಿಂಗಗಳು ಪತ್ತೆಯಾಗಿವೆ. ಸಂಸ್ಕೃತಿ, ಪರಂಪರೆ ಮೌಲ್ಯಯುಕ್ತ ವಸ್ತುಗಳನ್ನು ಸಂರಕ್ಷಿಸಲು ಭಾರತ ಹಾಗೂ ವಿಯೆಟ್ನಾಂ ಮುಂದಾಗಿದ್ದು, ವಿದೇಶಾಂಗ ಸಚಿವಾಲಯವು ಇದಕ್ಕಾಗಿ ಡಿಪಿಎ IV ಎಂಬ ವಿಭಾಗವನ್ನು ಸ್ಥಾಪಿಸಿದೆ.

 

ಕಳೆದ ಮೂರು ಕಾರ್ಯಾಚರಣೆಯಲ್ಲಿ ತಂಡವು, ಎರಡು ವಿಭಿನ್ನ ದೇಗುಲ ಸಂಕೀರ್ಣವನ್ನು ಪುನಾರಚನೆ ಮಾಡಿದೆ. ತಂಡ ಈಗ ಮೂರನೇ ಸಂಕೀರ್ಣದ ದೇವಾಲಯಗಳಲ್ಲಿ ಕೆಲಸ ಮಾಡುತ್ತಿದೆ ಎಂದು 'ಹಿಂದೂಸ್ತಾನ್ ಟೈಮ್ಸ್‌' ವರದಿ ಮಾಡಿದೆ.

 

మరింత సమాచారం తెలుసుకోండి: