ಇಂದಿನ ಜನಾಂಗ ವೇಗದ ಜೊತೆ ಬದುಕುವುದರಿಂದ ಎಲ್ಲಾ ಕೆಲಸಗಳೂಕೂಡ  ಶ್ರೀಘ್ರವಾಗಿಯೇ ಆಗಬೇಕು.ಇಲ್ಲದಿದ್ದರೆ ಜಗತ್ತು ನಮ್ಮನ್ನು ಹಿಂದೆಹಾಕುತ್ತದೆ. ಅದರಂತೆ ಇಂದಿನ ತಂತ್ರಜ್ಞಾನವು ದಿನದಿಂದ ದಿನಕ್ಕೆ ಅತೀ ವೇಗವಾಗಿ ಬೆಳೆಯುತ್ತಿರುವುದರಿಂದ ಮನುಷ್ಯನ ವೇಗದ ಗತಿಯನ್ನ ಹೆಚ್ಚಿಸುವಂತಹ ಸಂಶೋಧನೆಗಳು ನಡೆಯುತ್ತಲೇ ಇದೆ. ನಮಗೆ ಬೇಕಾದನ್ನು ಹುಡುಗಲು ಶುರು ಮಾಡಿದರೆ ರಿಂಗ್ ಸುತ್ತಲು ಶುರು ಮಾಡುತ್ತದೆ ಇಂತಹ ಕಿರಿಕಿರಿ ಜರು ಅನುಭವಿಸಿರ್ತೀರಿ. ತಿರುಗಿ ತಿರುಗಿ ಅದು ಓಪನ್ ಆಗುವಷ್ಟರಲ್ಲಿ ನಮ್ಮ ತಲೆ ತಿರುಗಿ ಹೋಗಿರುತ್ತೆ. 4ಜಿ ಸ್ಪೀಡ್ ಇದ್ದರು ಕೂಡ ಒಂದು ಸಿನಿಮಾ ಡೌನ್​​ಲೋಡ್ ಆಗೋಕೆ ಕನಿಷ್ಠ ಅಂದ್ರು ಅರ್ಧಗಂಟೆ ಬೇಕು.  ಇಂದು 4ಜಿ ಯುಗದಲ್ಲಿದ್ದರೂ ಕೂಡ 720ಪಿ ರೆಸಲೂಷನ್ ಇರುವ. 90 ನಿಮಿಷದ ಸಿನಿಮಾದ 5 ಸಾವಿರ ವಿಡಿಯೋಗಳು ಕೇವಲ, ಕೇವಲ 1 ಸೆಕೆಂಡ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು ಅಂದ್ರೆ ನಂಬ್ತೀರಾ?  ಹೌದು ಇಂತಹದೊಂದು ಸಂಶೋಧನೆ ಮಾಡಿದೆ ಆಸ್ಟ್ರೇಲಿಯಾದ ಸಂಶೋಧಕರ ತಂಡ.

 

ಹೌದು, ಆಸ್ಟ್ರೇಲಿಯಾದ ಮೊನಾಶಾ ವಿಶ್ವವಿದ್ಯಾಲಯ, ಸ್ವೈನ್ಬರ್ನ್ ವಿಶ್ವವಿದ್ಯಾಲಯ ಹಾಗೂ RMIT (Royal Melbourne Institute of Technology ) ಸಂಶೋಧಕರು ಈ ಹಿಂದೆ ಕಲ್ಪಿಸಲೂ ಸಾಧ್ಯವಾಗದಿರುವಂಥ ಇಂಟರ್​ನೆಟ್​ ವೇಗವನ್ನು ಕಂಡು ಹಿಡಿದಿದ್ದಾರೆ. ಈ ತಂತ್ರಜ್ಞರು ಕಂಡು ಹಿಡಿದಿರುವ ಈ ಆಪ್ಟಿಕಲ್ ಚಿಪ್, ಪ್ರತಿಸೆಕಂಡ್​ಗೆ 44.2 ಟೆರಾ ಬೈಟ್ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಆಸ್ಟ್ರೇಲಿಯಾದ ಫೈಬರ್ ಬ್ರಾಡ್​ಬ್ಯಾಂಡ್ ಲೈನ್​ನಲ್ಲಿ ಇದರ ಪರೀಕ್ಷೆಯಾಗಿದ್ದು. ಇಂಟರ್​ನೆಟ್​ಗೆ ಸದ್ಯದಲ್ಲಿಯೇ ಮಿಂಚಿನ ವೇಗ ಸಿಗುವ ಸೂಚನೆ ನೀಡಿದೆ. ಪರೀಕ್ಷೆಯಲ್ಲಿ ತಂತ್ರಜ್ಞರು ಆವಿಷ್ಕರಿಸಿರುವ ಚಿಪ್, 42.2ಟಿಬಿಪಿಎಸ್ ಅಂದ್ರೆ 42.2 ಟೆರಾಬೈಟ್ ಪರ್ ಸೆಕೆಂಡ್ (ಪ್ರತಿ ಸೆಕೆಂಡಿಗೆ 42.2 ಟೆರಾಬೈಟ್ ವೇಗ)ದಲ್ಲಿ ಕಾರ್ಯ ನಿರ್ವಹಿಸಿದೆ.

 

ಈ ಅಸಾಧ್ಯಕಾರ್ಯ ನಿರ್ವಹಿಸಲು ಸಂಶೋಧಕರು ಸೊಲಿಟನ್ ಕ್ರಿಸ್ಟಲ್ ಮೈಕ್ರೋ ಕೊಂಬ್ಸ್ ಬಳಸಲಾಗಿದೆ. ಇದು ಒಂದು ಆಪ್ಟಿಕಲ್ ಚಿಪ್ ಆಗಿದ್ದು ಆಪ್ಟಿಕ್ ಕೇಬಲ್ ಫೈರ್ ಬ್ರಾಂಡ್​ನಲ್ಲಿರುವ 80 ಲೇಸರ್ ನೋಡ್​ಗಳ ಪರ್ಯಾಯವಾಗಿ ಕೆಲಸ ಮಾಡುತ್ತದೆ. ಈ ಒಂದು ಮೈಕ್ರೋ ಕೊಂಬ್​ ಸ್ಪ್ಲಿಟ್ಟರ್ ರೀತಿ ಕಾರ್ಯ ನಿರ್ವಹಿಸಲಿದ್ದು ಆಪ್ಟಿಕ್ ಫೈಬರ್ ಕೇಬಲ್​ನ್ನು 80 ವಿಭಿನ್ನ ವಾಹಿನಗಳನ್ನಾಗಿ ಇದು ಭಾಗಿಸುತ್ತದೆ. ಇವು ಅತಿದೊಡ್ಡ ಡಾಟಾಗಳನ್ನು ಸರಾಗವಾಗಿ ಸಾಗಿಸುವ ಕೆಲಸ ಮಾಡುತ್ತವೆ. ಈ ಮೈಕ್ರೋ ಕೊಂಬ್ ಚಿಪ್​ನ್ನು ಟೆಲಿಕಮ್ಯೂನಿಕೇಷನ್ ಕೇಬಲ್​ಗಳಲ್ಲಿ ಅಳವಡಿಸುವುದರಿಂದ ಇಂಟರ್​ನೆಟ್​ಗೆ ಯಮವೇಗ ಸಿಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

 

ಯಾವಾಗ ಸಿಗಲಿದೆ ಈ ಮಿಂಚಿನ ವೇಗದ ಅಂತರ್ಜಾಲ..?


ಇದನ್ನು ಕೇಳಿದಾಗ ಇಂಟರ್​ನೆಟ್ ಪ್ರಿಯರಿಗೆ ಖುಷಿಯ ಪಾರವೇ ಇರಲ್ಲ. ಯಾವಾಗ ಸಿಗಲಿದೆ ಈ ಚಿಪ್ ಅಂತ ಕುತೂಹಲ ಮೂಡುವುದಂತು ಸಹಜ. ಆದ್ರೆ ಸ್ವಲ್ಪ ನಿಧಾನಿಸಿ. ಇದು ಮಾರುಕಟ್ಟೆಗೆ ಬರಲು ಇನ್ನೂ ಟೈಮ್ ಇದೆ. ಎಲ್ಲಾ ಸಾಧನೆಗಳು ಮೊದಲ ಹಂತದಲ್ಲಿ ಪಾಸಾದಾಗ ಅದು ಸಂಶೋಧನೆಯ ಪ್ರಥಮ ಮೆಟ್ಟಿಲಾಗಿರುತ್ತದೆ ಈ ಆಪ್ಟಿಕಲ್ ಚಿಪ್ ಕೂಡ ಮೊದಲ ಹಂತದ ಪರೀಕ್ಷೆಯಲ್ಲಿ ಪಾಸಾಗಿದ್ದು. ಈ ಆಪ್ಟಿಕಲ್ ಚಿಪ್ ಕೂಡ ಇನ್ನೂ ಹಲವು ವಾಣಿಜ್ಯಾತ್ಮಕ ಪ್ರಕ್ರಿಯೆಗಳನ್ನು ದಾಟಿ ಬರಬೇಕಿದೆ. ಅಲ್ಲದೇ ಇದು ಕೊನೆಯ ಹಂತದ ಪರೀಕ್ಷೆಯಲ್ಲೂ ಪಾಸಾದ ಮೇಲೆ ವಿಶ್ವದೆಲ್ಲೆಡೆ ಸದ್ಯ ಜಾರಿಯಲ್ಲಿರುವ ಪೈಬರ್​ ಬ್ರ್ಯಾಡ್​ಬಾಂಡ್​ ಲೈನ್​ಗಳ ಆಧುನೀಕರಣಗೊಳಿಸಬೇಕಿದೆ. ಇವೆಲ್ಲಾ ಮುಗಿದ ಬಳಿಕವೂ ಮೊದಲು ಉದ್ಯಮ ವಲಯಕ್ಕೆ, ಬಾಹ್ಯಾಕಾಶ ಸಂವಹನಗಳಿಗೆ, ಸ್ಮಾರ್ಟ್​ ಸಿಟಿಗಳಿಗೆ ಆದ್ಯತೆ ನೀಡಿ ಮೊದಲು ಅಲ್ಲಿ ಈ ವೇಗವನ್ನು ಅಳವಡಿಸಲಾಗುತ್ತದೆ. ಇದು ಜನ ಸಾಮಾನ್ಯರ ಕೈಗೆ ಸಿಗಲು ಇನ್ನಷ್ಟು ದಿನ ಕಾಯುವ ಅನಿವಾರ್ಯತೆಯಿದೆ.

 

 

మరింత సమాచారం తెలుసుకోండి: