ಆಪರೇಷನ್ ನಕ್ಷತ್ರ' ಈ ಹೆಸರು ಕೇಳಿದರೆ ಸಾಕು ನಮಗೆ ರಾಜಕುಮಾರ್ ನೆನಪಾಗುತ್ತಾರೆ. ಯಾಕಂದ್ರೆ ರಾಜಕುಮಾರ್ ಆಪರೇಶನ್ ಡೈಮಂಡ್ ರಾಕೆಟ್ ಅನ್ನೋ ಸಿನಿಮಾ ಮಾಡಿದ್ರು. ಇದೀಗ ಆಪರೇಶನ್ ನಕ್ಷತ್ರ ಅನ್ನೋ ಸಿನಿಮಾ ಇದೇ ಟೈಟಲ್ ಮೂಲಕ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಅಷ್ಟಕ್ಕೂ ಈ ಚಿತ್ರದ ಕಥೆ ಏನಂದ್ರೆ, ನಾಲ್ವರು ಸ್ನೇಹಿತರಿರ್ತಾರೆ. ಇಅವರು ಹಣದ ಹಿಂದೆ ಹೋದಾಗ, ಅಲ್ಲಿ ನಡೆಯುವ ಯಡವಟ್ಟುಗಳ ಸುತ್ತಲೂ ಈ ಕಥೆಯನ್ನು ಹೆಣೆಯಲಾಗಿದೆ. ಇದರಲ್ಲಿ ಯುವ ಪೀಳಿಗೆಯ ಬದುಕನ್ನೇ ಆಧಾರವಾಗಿ ಇಟ್ಟಿಕೊಳ್ಳಲಾಗಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದ ಈ ಚಿತ್ರ ಸದ್ಯಕ್ಕೆ ಟೈಟಲ್‌ನಿಂದಲೇ ಸದ್ದು ಮಾಡುತ್ತಿದೆ. ಈ ಸಿನಿಮಾದ ಲಿರಿಕಲ್ ಸಾಂಗ್ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಈ ಹಾಡನ್ನು ಬಿಡುಗಡೆ ಮಾಡೋಕೆ ರಕ್ಷಿತ್ ಶೆಟ್ಟಿ ಬರ್ತಿದ್ದಾರೆ.


ಮೇ 24 ರಂದು ಸಂಜೆ 7 ಗಂಟೆಗೆ ಈ ಹಾಡು ರಿಲೀಸ್ ಆಗಲಿದೆ. ಅಲ್ಲದೇ ಈ ಹಾಡಿಗೆ ವಿಜಯ್ ಭರಮಸಾಗರ್ ಸಾಹಿತ್ಯ ಬರೆದಿದ್ದಾರೆ. ವೀರ್ ಸಮರ್ಥ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ


ಮಧುಸೂದನ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಮೊದಲ ಸಿನಿಮಾ ಇದಾಗಿದೆ. ಕಿಶೋರ್ ಮೇಗಳಮನೆ ಮಧುಸೂದನ್ ಇಬ್ಬರೂ ಸಂಭಾಷಣೆ ಬರೆದಿದ್ದಾರೆ. ಶಿವಸೀನ ಛಾಯಗ್ರಾಹಣ ಹೊಣೆ ಹೊತ್ತಿದ್ದಾರೆ. ಇನ್ನು ಕಿಟ್ಟು ಅರ್ಜುನ್ ಸಂಕಲನ, ಕಂಬಿರಾಜು ನೃತ್ಯ ನಿರ್ದೇಶನ ಮಾಢಿದ್ದಾರೆ. 


ಈ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಅದರಲ್ಲಿ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್‍ಸೂರ್ಯ, ದೀಪಕ್‍ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮೀ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.




మరింత సమాచారం తెలుసుకోండి: