ಮೇ ೨೪ ರಂದು ಡಾಟರ್ ಆಫ್ ಪಾರ್ವತಮ್ಮ ಬಿಡುಗಡೆ ಆಗಲಿದೆ. ಈ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದರ ಸಲುವಾಗಿ ಚಿತ್ರತಂಡ ಒಂದು ಕಾಂಟೆಸ್ಟ್ ನಡೆಸುತ್ತಿದ್ದಾರೆ. ನಿಮ್ಮ ತಾಯಿಯ ಜೊತೆಗೆ ಸೆಲ್ಫಿ ತೆಗೆದು 7411157888ಗೆ ವಾಟ್ಸಾಪ್ ಮಾಡಿ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಹರಿಪ್ರಿಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಸುಮಲತಾರವರ ಜೊತೆಗಿನ ಪೋಟೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ.
ಇನ್ನು ಈ ಚಿತ್ರದ ಬಗ್ಗೆ ಹೇಳಬೇಕಂದರೆ, ಇದು ಹರಿಪ್ರಿಯಾ ಅವರ 25 ನೇ ಸಿನಿಮಾ. ಹರಿಪ್ರಿಯಾ ಈ ಚಿತ್ರದಲ್ಲಿ ಖಡಕ್ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಹರಿಪ್ರಿಯಾ ಅವರ ತಾಯಿಯ ಪಾತ್ರದಲ್ಲಿ ಸುಮಲತಾ ನಟಿಸಿದ್ದಾರೆ. ಕ್ರೈಂ ಸುತ್ತ ಹೆಣೆದಿರುವ ಕತೆಯಿದು. ಈ ಚಿತ್ರವನ್ನು ದಿಶಾ ಎಂಟರ್ ಟೈನ್ಮೆಂಟ್ ಬ್ಯಾನರ್ ನಲ್ಲಿ ಹೊರ ತರಲಾಗುತ್ತಿದೆ. ಶಂಕರ್ ಜೆ ಇದರ ನಿರ್ದೇಶಕರಾಗಿದ್ದಾರೆ.
click and follow Indiaherald WhatsApp channel