ಭಾರತದ ಕ್ರಿಕೆಟ್ ತಂಡದ ಆಟಗಾರ ಹಾಗೂ ದಾವಣಗೆರೆ ಎಕ್ಸ್ ಪ್ರೆಸ್ ಎಂದೇ ಖ್ಯಾತಿಯಾದ ವಿನಯ್ ಕುಮಾರ್ ಅವರು ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಪೋಸ್ಟರ್ ಅನ್ನು ಮೆಚ್ಚಿಕೊಂಡಿದ್ದಾರೆ.ಅಲ್ಲದೇ ಈ ಕುರಿತು ಟ್ವೀಟ್ ಮಾಡಿ ಸುದೀಪ್ ಗೆ ಶುಭ ಹಾರೈಸಿದ್ದಾರೆ.
(ಕ್ರಿಕೆಟಿಗ ವಿನಯ್ ಕುಮಾರ್)
ಹೌದು, ಕಳೆದ ಮಂಗಳವಾರ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೋಸ್ಟರ್ ಬಿಡುಗಡೆ ಆಗಿತ್ತು. ಈ ಪೋಸ್ಟರ್ ನಲ್ಲಿ ಸುದೀಪ್ ಖಡಕ್ ಬಾಕ್ಸಿಂಗ್ ಪಟುವಾಗಿ ಕಾಣಿಸಿಕೊಂಡಿದ್ದರು. ಪೋಸ್ಟರ್ ನೋಡುತ್ತಿದ್ದಂತೆಯೇ, ಸುದೀಪ್ ಚಿತ್ರಕ್ಕಾಗಿ ಮಾಡಿದ ವರ್ಕೌಟ್ ಎದ್ದು ಕಾಣುವಂತಿತ್ತು.
ಇದನ್ನು ನೋಡಿದ ಅನೇಕರು ಪೋಸ್ಟರ್ ಬಗ್ಗೆ ಮೆಚ್ಚುಗೆ ಮಾತುಗಳನ್ನು ಹೇಳಿದ್ದರು. ಅದರಲ್ಲಿ ಚಿರಂಜೀವಿ, ವಿಜಯ್ ಸೇತುಪತಿ, ಮೋಹನ್ ಲಾಲ್, ಹಾಗೂ ಸುನೀಲ್ ಶೆಟ್ಟಿ ಪ್ರಮುಖರು. ಇದೀಗ ಈ ಸಾಲಿಗೆ ವಿನಯ್ ಪ್ರಸಾದ್ ಸೇರ್ಪಡೆ ಆಗಿದ್ದಾರೆ.
"ಹಾಯ್ ಬಿಗ್ ಬ್ರದರ್, ನೀವು ನಮ್ ಹೀರೋ. ಪೋಸ್ಟರ್ ಇಷ್ಟ ಆಗಿದೆ. ಇದರಲ್ಲಿ ನೀವು ಹಾಕಿರೋ ಪರಿಶ್ರಮ ಕಾಣುತ್ತಿದೆ" ಎಂದು ಕ್ರಿಕೆಟಿಗ ವಿನಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
click and follow Indiaherald WhatsApp channel