ಸೋನು ಗೌಡ 'ಐ ಲವ್ ಯೂ' ಚಿತ್ರದ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಆರ್. ಚಂದ್ರು ನಿರ್ದೇಶನದಲ್ಲಿ, ಉಪೇಂದ್ರ ನಾಯಕ ನಟ ಆಗಿರುವ ಐ ಲವ್ ಯೂ ಚಿತ್ರದಲ್ಲಿ ಸೋನು ಗೌಡ ಅವರಿಗೆ ವಿಭಿನ್ನ ಪಾತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದೆ. ಈ ಕುರಿತು ಸೋನು ಹೇಳಿದ್ದೇನು? ಇಲ್ಲಿದೆ ನೋಡಿ.
(ಸೋನು ಗೌಡ)
ಐ ಲವ್ ಯೂ ಚಿತ್ರ ಭಾವನಾತ್ಮಕ ಕತೆ. ಇದರಲ್ಲಿ ಸೋನು ಗೌಡ, ಉಪ್ಪಿ ಅವರ ಪ್ರೇಯಸಿಯಾಗಿಯೋ ಅಥವಾ ಹೆಂಡತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಅವರದು ವಿಶೇಷ ಪಾತ್ರ ಎಂದಷ್ಟೇ ಹೇಳಲಾಗಿದೆ. ಚಿತ್ರ ಬಿಡುಗಡೆ ಆದಮೇಲೆಯೇ ನೀವು ನನ್ಮ ಪಾತ್ರದ ಕುರಿತು ನೋಡಲಿದ್ದೀರಿ ಎಂದಿದ್ದಾರೆ ಸೋನು ಗೌಡ.
(ಐ ಲವ್ ಯೂ ಪೋಸ್ಟರ್)
ಇದರಲ್ಲಿ ಚಿತ್ರಕಥೆಯನ್ನು ಉಪ್ಪಿಗಾಗಿಯೇ ಬರೆಯಲಾಗಿದೆಯಂತೆ. ಈ ಚಿತ್ರ ಎಲ್ಲ ಪೀಳಿಗೆಯವರಿಗೂ ಇಷ್ಟವಾಗುತ್ತದೆ ಎಂದು ಸೋನು ಗೌಡ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಚಿತ್ರ ವೀಕ್ಷಿಸಿ ಹೊರ ಬಂದಾಗ ಪ್ರೇಕ್ಷಕರು ನನ್ನ ಪಾತ್ರದ ಬಗ್ಗೆ ಮಾತನಾಡಿದರೆ ಸಾಕು ನಾನು ಗೆದ್ದಂತೆ ಎಂದಿದ್ದಾರೆ.
click and follow Indiaherald WhatsApp channel