ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಶತಕದ ಸಂಭ್ರಮ ಕಂಡಿದೆ. ಹೌದು, ದರ್ಶನ್ ಅಂದ್ರೆನೇ ಹಾಗೆ ಯಾವತ್ತೂ ಅದೇ ಕ್ರೇಜ್ ಉಳಿಸಿಕೊಂಡು ಬಂದಿದ್ದಾರೆ. ಹೀಗಾಗಿ ಯಜಮಾನ ಸಿನಿಮಾ ಇದೀಗ ಶತಕದ ಗಡಿ ದಾಟಿದೆ ಅನ್ನೋದೇ ಮತ್ತೊಂದು ಇಂಟರೆಸ್ಟಿಂಗ್.
ಯಜಮಾನ ಸಿನಿಮಾ ಮಾರ್ಚ್ 1 ರಂದು ದೇಶದಾದ್ಯಂತ ತೆರೆ ಕಂಡಿತ್ತು. ಅಲ್ಲದೇ ಇನ್ನೂ ಸಾಕಷ್ಟು ಚಿತ್ರ ಮಂದಿರಗಳಲ್ಲಿ ಇದೀಗ ಯಜಮಾನ ತೆರೆ ಕಾಣುತ್ತಿದೆ. ಒಟ್ಟಾರೆ ಶತದಿನಗಳನ್ನು ಪೂರೈಸಿದ ಖುಷಿ ಯಜಮಾನ ಚಿತ್ರತಂಡದ್ದು.
ಯಜಮಾನ ಸಿನಿಮಾದಲ್ಲಿ ದರ್ಶನ್ ಅಭಿನಯ ಹಾಗೂ ಸಾಮಾಜಿಕ ಕಳಕಳಿ ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಪಕ್ಕಾ ಫ್ಯಾಮಿಲಿ ಚಿತ್ರದ ಜೊತೆಗೆ ಮಾಸ್ ಟಚ್ ಕೂಡ ಈ ಚಿತ್ರಕ್ಕೆ ಇದೆ. ಈ ಸಿನಿಮಾದಲ್ಲಿ ದೇವರಾಜ್, ರಶ್ಮಿಕಾ ಹಾಗೂ ತಾನ್ಯಾ ಹೋಪ್ ಹಾಗೂ ಮತ್ತಿತರರು ನಟಿಸಿದ್ದಾರೆ.
click and follow Indiaherald WhatsApp channel