ನಟಿ ಪ್ರಿಯಾಮಣಿ ಅವರ ಹುಟ್ಟು ಹಬ್ಬದ ಪ್ರಯುಕ್ತ (ಜೂ.4) ಡಾ. 56 ಚಿತ್ರತಂಡ ಇತ್ತೀಚೆಗೆ ಮೋಶನ್ ಟೀಸರ್ ಬಿಡುಗಡೆ ಮಾಡಿತ್ತು. ಈ ಮೂಲಕ ಅವರಿಗೆ ಬರ್ಥಡೇ ಗಿಫ್ಟ್ ನೀಡಿತ್ತು. ಅಲ್ಲದೇ ಪ್ರಿಯಾಮಣಿ ಇದೀಗ ಸರಳವಾಗಿ ತಮ್ಮ ಬರ್ಥಡೇ ಆಚರಿಸಿಕೊಂಡಿದ್ದಾರೆ.
ಡಾ.56 ಎನ್ನುವ ಚಿತ್ರ ಮಹಿಳಾ ಪ್ರಧಾನ ಕಥಾ ಹಂದರ ಹೊಂದಿದ್ದು, ಪ್ರಿಯಾಮಣಿ ಸಿಬಿಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಕಾಕತಾಳೀಯ ಏನೆಂದರೆ, ಡಾ.56 ಇದು ಅವರ 56 ಚಿತ್ರವಾಗಿದೆ.
ಈ ಚಿತ್ರದ ಮೊಶನ್ ಟೀಸರ್ ಸದ್ಯಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದರಲ್ಲಿ ಸೈನ್ಸ್ ಫಿಕ್ಷನ್ ಜೊತೆಗೆ ಮರ್ಡರ್ ಮಿಸ್ಟರಿ ಇದೆ. ಈ ಚಿತ್ರವನ್ನು ರಾಜೇಶ್ ಆನಂದ್ ಲೀಲಾ ಅವರು ಬಿಡುಗಡೆ ಮಾಡಿದ್ದಾರೆ.
ಪ್ರವೀಣ್ ರೆಡ್ಡಿ ಅವರು ಚಿತ್ರಕಥೆ ಬರೆದು, ನಿರ್ಮಾಣದ ಗುರಿ ಹೊತ್ತಿದ್ದಾರೆ. ಈ ಚಿತ್ರಕ್ಕೆ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಮಾಡಿದ್ದಾರೆ. ವಿಶ್ವ ಸಂಕಲನ, ಶಂಕರ್ ಅವರು ಹಾಡುಗಳನ್ನು ಬರೆದಿದ್ದಾರೆ.
click and follow Indiaherald WhatsApp channel