ಕಿರುತೆರೆಯ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ ಇದೀಗ ಮತ್ತಷ್ಟು ಬ್ಯುಸಿ ಆಗಿದ್ದಾರೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ನಿರೂಪಕಿ ಆಗಿಯೂ ಮಿಂಚುತ್ತಾ ಇದಾರೆ. ಈ ಎಲ್ಲದರ ಮದ್ಯ ಇದೀಗ ಬಂಪರ್ ಆಫರ್ ಒಂದು ಅನುಪಮಾಗೆ ಸಿಕ್ಕಿದೆ. 

 

ಹೌದು, ಕಿರುಚಿತ್ರದಲ್ಲಿ ಅಭಿನಯಿಸೋಕೆ ಅನುಪಮಾ ಸಜ್ಜಾಗಿದ್ದಾರೆ. ಇದರ ವಿಶೇಷತೆ ಏನಂದರೆ, ಈ ಚಿತ್ರ ಹಿಂದಿಯಲ್ಲಿ ತಯಾರಾಗುತ್ತಿದೆ. ಊರ್ವಿ ಚಿತ್ರದ ಖ್ಯಾತಿ ಪ್ರದೀಪ ವರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

 

ಈ ಕಿರುಚಿತ್ರಕ್ಕೆ ದಿ ಫಾಲನ್ ಎನ್ನುವ ಹೆಸರಿಟ್ಟಿದ್ದು, ಇದು ಬರೋಬ್ಬರಿ 4 ಸಾವಿರ ವರ್ಷಗಳ ಹಿಙದಿನ ಕತೆಯಂತೆ. ಅಲ್ಲದೆ ಅದ್ದೂರಿಯಾಗಿ ಈ ಕಿರುಚಿತ್ರ ತಯಾರಾಗುತ್ತಿದೆಯಂತೆ. ಜೊತಗೆ ಪೋಟೋಶೂಟ್ ಮಾಡಿಸುವ ಪ್ಲಾನ್ ಕೂಡ ಹಾಕಲಾಗಿದೆ. 

మరింత సమాచారం తెలుసుకోండి: