ನಿರ್ದೇಶಕ ಒವನ್ ಒಡೆಯರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟ ಸಾರ್ವಭೌಮ ಚಿತ್ರದ ನಂತರ ಪವನ್ ಒಡೆಯರ್ ಯಾವುದೇ ಸಿನಿಮಾ ನಾಡಿರಲಿಲ್ಲ. ಇದೀಗ ಒಂದು ಲವ್ ಸ್ಟೋರಿಗೆ ಪವನ್ ಒಡೆಯರ್ ಕೈ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟಕ್ಕೂ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರಕ್ಕೆ ಇಶಾನ್ ನಾಯಕ. ಇನ್ನು ಚಿತ್ರದ ನಾಯಕಿ ಆಶಿಕಾ ರಂಗನಾಥ್ ಎಂದು ತಿಳಿದು ಬಂದಿದೆ. ಹೌದು ಪವನ್ ಒಡೆಯರ್ ಲವ್ ಸಿನಿಮಾ ಮಾಡೋದರಲ್ಲಿ ಎತ್ತಿದ ಕೈ. ಹೀಗಾಗಿ ಆಶಿಕಾ ರಂಗನಾಥ್ ಅವರ ಅಕೌಂಟ್ ಗೆ ಮತ್ತೊಂದು ಸಿನಿಮಾ ಇದೋಗ ಸೇರ್ಪಡೆ ಆಗಿದೆ.
ಗೂಗ್ಲಿ ನಂತರ ಯಾವುದೆ ಲವ್ ಸ್ಟೋರಿಗಳನ್ನು ಪವನ್ ಒಡೆಯರ್ ಮಾಡಿರಲಿಲ್ಲ. ಹೀಗಾಗಿ ಈ ಬಾರಿ ಮತ್ತೊಮ್ಮೆ ಪವನ್ ಒಡೆಯರ್ ಪ್ರೇಮಿಗಳ ಹಾಗೂ ಯುವಜನತೆಯ ಮನಸು ಕದಿಯಲು ಒಳ್ಳೆ ಸಿನಿಮಾವನ್ನು ತೆರೆ ಮೇಲೆ ತರೋಕೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
click and follow Indiaherald WhatsApp channel