ಅರುಂಧತಿ ಎಂದ ತಕ್ಷಣ ನೆನಪಿಗೆ ಬರೋದೆ ಅನುಷ್ಕಾ ಶೆಟ್ಟಿ. ಹೌದು ಆದರೆ ಇದೀಗ ಅರುಂಧತಿ 2 ಎನ್ನುವ ಸಿನಿಮಾ ಬರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅರುಂಧತಿ ಸಿನಿಮಾ ಅನುಷ್ಕಾ ಶೆಟ್ಟಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು. ಹಾಗಾದರರೆ ಅರುಂಧತಿ 2 ಚಿತ್ರದಲ್ಲಿ ಯಾರು ಅಭಿನಯಿಸುತ್ತಿದ್ದಾರೆ ಅನ್ನೋದು ಕುತೂಹಲ.


ಅನುಷ್ಕಾ ಶೆಟ್ಟಿ ಅವರೇ ಅರುಂಧತಿ 2 ರಲ್ಲಿ ಅಭಿನಯಿಸುತ್ತಾರೆ ಎನ್ನಲಾಗಿತ್ತು. ಆದರೆ, ಇದೀಗ ಈ ಸಿನಿಮಾಗೆ ಮತ್ತೊಮ್ಮೆ ನಾಯಕಿಯ ಆಯ್ಕೆ ಆಗಿದೆ. ಆ ನಾಯಕಿ ಬೇರೆ ಯಾರು ಅಲ್ಲ ಪಾಯಲ್ ರಜಪೂತ್. 


ಹೌದು, ಪಾಯಲ್ ರಜಪೂತ್ ಅವರು ಆರ್ ಎಕ್ಸ್ 100 ಸಿನಿಮಾ ಮೂಲಕ ಟಾಲಿವುಡ್‌ ಗೆ ಕಾಲಿಟ್ಟವರು. ತಮ್ಮ ಮೊದಲ ಸಿನಿಮಾದಲ್ಲಿಯೇ ಹಸಿಬಿಸಿ ದೃಶ್ಯದ ಮೂಲಕ ಸದ್ದು ಮಾಡಿದ್ದರು. ಆದರೆ ಇದೀಗ ಅರುಂಧತಿ 2 ಚಿತ್ರದಲ್ಲಿ  ಅದ್ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ. 


మరింత సమాచారం తెలుసుకోండి: