ಕನ್ನಡದಲ್ಲಿ ರ್ಯಾಂಪ್ ಸಾಂಗ್ ಅಂದರೆ ಸಾಕು ಅದಕ್ಕೆ ಮತ್ತೊಂದು ಹೆಸರು ಚಂದನ್ ಶೆಟ್ಟಿ. ಹೌದು, ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಗಿರಗಿರ ಅಂದಿದೆ ಅನ್ನೋ ಹಾಡು ದೊಡ್ಡ ಮಟ್ಟಕ್ಕೆ ಹಿಟ್ ಆಯಿತು. ಅದ್ಯಾವ ಕಡೆಗೂ ಆರ್ಕೆಸ್ಟ್ರಾ ನಡೆದರೂ, ಸಮಾರಂಭಗಳಾದರೂ ಅಲ್ಲಿ ಈ ಹಾಡಿನದ್ದೇ ಹವಾ ಅನ್ನೋದು ನಿಮಗೆ ಗೊತ್ತಿದೆ.


ಈ ಹಾಡನ್ನು ಹಾಡಿದ್ದುಉ ಬೇರೆ ಯಾರೂ ಅಲ್ಲ, ಚಂದನ್ ಶೆಟ್ಟಿ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಾಡಿನಿಂದ ಚಂದನ್ ಶೆಟ್ಟಿ ಅವರು ಒಮ್ಮೆಲೆ ಸ್ಟಾರ್ ಆದರು. ಅಲ್ಲದೇ ಚಂದನವನದಲ್ಲಿ ಭದ್ರವಾಗಿ ನೆಲೆ ಊರಿದರು. ಇದಾದ ಮೇಲೆ ಟಕಿಲಾ ಅನ್ನೋ ಸಾಂಗ್ ಬಂತು ಬಂತು. ಆಮೇಲೆ ಬಿಗ್ ಬಾಸ್ ಮನೆಗೆ ಕಾಲಿಟ್ರು. ವಿನ್ನರ್ ಕೂಡ ಆದ್ರು.


ಆದರೆ ಇದೀಗ ಹೊಸ ವಿಷ್ಯ ಏನಪ್ಪ ಅಂದರೆ, ಚಂದನ್ ಅವರು ಮತ್ತೊಂದು ಆಲ್ಬಂ ಸಾಂಗ್ ರೆಡಿ ಮಾಡ್ತಾ ಇದಾರೆ. ಈ ಬಾರಿ ಚಂದನ್ ರಿಲೀಸ್ ಮಾಡ್ತಾ ಇರೋದು ಮ್ಯೂಸಿಕ್ ವಿಡೀಯೋ ಆಲ್ಬಂ ಹೆಸರು ಶೋಕಿಲಾಲ. ಹೌದು ಇದೊಂದು ರೀತಿಯ ಪಾಪ್ ಸಾಂಗ್. ಮೆಲೋಡಿ, ಹಿಪ್ ಆಪ್ ಇದೆ ಎನ್ನಲಾಗಿದೆ.


ಈ ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನೇನು ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಆಗಬೇಕಿದೆ. ಈ ಹಾಡಿನಲ್ಲಿ ಚಂದನ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡು ಮತ್ತೊಂದು ಸೂಪರ್ ಹಿಟ್ ಆಗುತ್ತೆ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಎಂದು ಚಂದನ್ ಶೆಟ್ಟಿ ವಿಶ್ವಾಸ ಇಟ್ಕೊಂಡಿದ್ದಾರೆ. 


మరింత సమాచారం తెలుసుకోండి: