ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ತಮ್ಮ ಖಾಸಗಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನೆಟ್ಟಿಗರ ಕಿಚ್ಚು ಹೆಚ್ಚಿಸಿದ್ದಾರೆ. ಅಷ್ಟಕ್ಕೂ ಅವರು ಹಂಚಿಕೊಂಡಿರುವ ಚಿತ್ರಗಳನ್ನು ನೋಡಿದ ಪಡ್ಡೆ ಹುಡುಗರು ಪ್ರಿಯಾಂಕಾ ಅವರನ್ನು ಟ್ರಾಲ್ ಮಾಡುತ್ತಿದ್ದಾರೆ. 


ಹೌದು, ಚೋಪ್ರಾ ತಮ್ಮ ಪತಿ ನಿಕ್ ಜೋನಾಸ್ ಜೊತೆ ಇಟಲಿಯಲ್ಲಿ ರಜೆ ದಿನಗಳನ್ನು ಮಜಾ ಮಾಡುತ್ತಿದ್ದಾರೆ. ಈ ವೇಳೆಯಲ್ಲಿ ತೆಗೆದ ಖಾಸಗಿ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ  ಹಂಚಿಕೊಂಡಿದ್ದಾರೆ.  ಇದರ ವಿಶೇಷ ಏನೆಂದರೆ, ಈ ಫೋಟೋ ಅವರ ಪತಿ ನಿಕ್ ಜೋನಸ್ ತೆಗೆದಿದ್ದರೆಂಬುದು. 


ಇನ್ಸ್ಟಾಗ್ರಾಮ್ ನಲ್ಲಿ ಪ್ರಿಯಾಂಕಾ ಈ ಫೋಟೋ ಶೇರ್ ಮಾಡಿದ್ದಾರೆ. ಜೋನಾಸ್ ಗೆ ಧನ್ಯವಾದ ಹೇಳಿದ್ದಾರೆ. ಈ ಚಿತ್ರದಲ್ಲಿ ಚೋಪ್ರಾ ಕೈಯಲ್ಲಿ ಕಾಕ್ಟೇಲ್ ಗ್ಲಾಸ್ ಇದೆ, ಮತ್ತೊಂದು ಫೋಟೋದಲ್ಲಿ ಈಜುಕೊಳದಲ್ಲಿದ್ದಾರೆ. ಹೀಗೆ ಒಟ್ಟು ಮೂರು ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ್ದು, ಇದೀಗ ವೈರಲ್ ಆಗಿವೆ. 


మరింత సమాచారం తెలుసుకోండి: