ಸರಿಲೇರು ನೀಕೆವ್ವರು ಚಿತ್ರದ ಶೂಟಿಂಗ್ ನಡೆಯುತ್ತಿದೆ.ಈ ಚಿತ್ರದಲ್ಲಿ ನಾಯಕನಾಗಿ ಮಹಶ್ ಬಾಬು ಕಾಣಿಸಿಕೊಳ್ಳುತ್ತಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ಹಾರಿದ್ದರು. ಭಾರತೀಯ ಸೇನೆಯ ಮೇಜರ್ ಪಾತ್ರದಲ್ಲಿ ಮಹೇಶ್ ಬಾಬು ಮಿಂಚಲಿದ್ದಾರೆ. ಈ ಚಿತ್ರದ ನಿರ್ದೇಶನ ಅನಿಲ್ ರವಿಪುಡಿ.
ಹೌದು, ಕಾಶ್ಮೀರದ ಕೆಲವು ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇದೀಗ ವಿಷಯ ಏನಪ್ಪ ಅಂದರೆ, ಮಹೇಶ್ ಬಾಬು ಅವರು ಮೇಜರ್ ಆಗಿ ಕಾಣಿಸಿಕೊಳ್ಳುವ ಲುಕ್ ಲೀಕ್ ಆಗಿದೆ. ಹೌದ ಮೇಜರ್‌ಗಳು ಧರಿಸುವ ಸಮವಸ್ತ್ರ ಮಹೇಶ್ ಬಾಬುಗೆ ಹೇಳಿ ಮಾಡಿಸಿದಂತಿದೆ.
ಮಹೇಶ್ ಬಾಬು ಉದ್ದನೆಯ ಕೂದಲು ಬಿಟ್ಟಿದ್ದಾರೆ. ಆದರೆ ಸೈನ್ಯದವರು ಯಾವಾಗಲೂ ಚಿಕ್ಕದಾಗಿ ಕಟಿಂಗ್ ಮಾಡಿಸಿಕೊಂಡಿರುತ್ತಾರೆ. 2020 ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಮಿಂಚಲಿದ್ದು, ಹಿರಿಯ ನಟಿ ವಿಜಯಶಂತಿ ಒಂದು ದಶಕದ ನಂತರ ನಟನೆಗೆ ಮರಳಿದ್ದಾರೆ.
click and follow Indiaherald WhatsApp channel