ಮುನಿರತ್ನ ಕುರುಕ್ಷೇತ್ರದಲ್ಲಿ ಬಹುಭಾಷಾ ನಟಿ ಸ್ನೇಹಾ ಅವರು ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ನೃತ್ಯಗಾರ್ತಿಯಾಗಿ ಹರಿಪ್ರಿಯಾ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನು ದುರ್ಯೋದನ ಪತ್ನಿ ಪಾತ್ರದಲ್ಲಿ ಮೇಘನಾ ರಾಜ್ ಅವರು ನಟಿಸಿದ್ದು,. ಇದು ಚಿತ್ರಕ್ಕೆ ಮೈಲೇಜ್ ಹೆಚ್ಚಿಸಿದೆ ಎನ್ನಲಾಗುತ್ತಿದೆ. 

ಈ ಮೂರು ಪಾತ್ರಗಳನ್ನು ಬಿಟ್ಟರೆ ಮಾತ್ರ ಇನ್ಯಾರೂ ಗ್ಲಾಮರ್ ಬೊಂಬೆ ಕುರುಕ್ಷೇತ್ರದಲ್ಲಿ ಇಲ್ಲ ಎನ್ನಲಾಗಿತ್ತು. ಆದರೆ ಅಚ್ಚರಿ ವಿಷಯವೇನು ಗೊತ್ತೇ? ಈ ಚಿತ್ರದಲ್ಲಿ ಇನ್ನೂ ಕೆಲವರು ನಟಿಸುತ್ತಿದ್ದಾರೆ. ಹೌದು ಈಗಾಗಲೇ ಅಭಿಮನ್ಯು ಜೋಡಿ ಆಗಿ ಉತ್ತರೆ ಪಾತ್ರದಲ್ಲಿ ಅದಿತಿ ಆರ್ಯ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಇದಿಷ್ಟೇ ಅಲ್ಲ, ಮತ್ತೆ ಮೂವರು ಯುವನಟಿಯರು ಸಹ ಚಿತ್ರದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಹಾಗಾದರೆ ಸುಯೋದನನಿಗೆ ಸಾಥ್ ನೀಡಿದ ಆ ನಟಿಯಾದರೂ ಯಾರು ಅನ್ನೋದನ್ನು ಇದೀಗ ಹೇಳ್ತಿವಿ ನೋಡಿ. ಈ ಮೊದಲು ಅಭಿಮನ್ಯು ಅವರ ಹೆಂಡತಿ ಪಾತ್ರಕ್ಕೆ ರೆಜಿನಾ ಅವರ ಹೆಸರು ಕೇಳಿ ಬಂದಿತ್ತು. ಆಮೇಲೆ ಉತ್ತರೆ ಪಾತ್ರದಲ್ಲಿ ಅದಿತಿ ಆರ್ಯ ಅವರು ಬಣ್ಣ ಹಚ್ಚಿದ್ದರು. ಅಲ್ಲಿಗೆ ರೆಜಿನಾ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ಡೌಟ್ ಎನ್ನಲಾಗಿತ್ತು. ಆದರೆ ಇದೀಗ ಕುರುಕ್ಷೇತ್ರ ಸಿನಿಮಾದಲ್ಲಿ ರೆಜಿನಾ ಅವರು ಹೆಸರು ಕಾಣಿಸಿಕೊಂಡಿದೆ. 

ಇನ್ನು ಕುರುಕ್ಷೇತ್ರದ ಚಿತ್ರೀಕರಣ ಆರಂಭವಾದಾಗ ಕೇಳಿ ಬಂದ ಮತ್ತೊಂದು ಹೆಸರು ಮಲಯಾಂಳ ನಟಿ ರಮ್ಯಾ ನಂಬಿಸೇನ್. ಹೌದು ಇವರು ಕೂಡ ಇದೀಗ ಅಭಿನಯಿಸಲಿದ್ದಾರೆ. ಇದೀಗ ಮೇಘನಾ ರಾಜ್ ಮಾಡಿರುವ ಭಾನುಮತಿ ಪಾತ್ರದಲ್ಲಿ ರಮ್ಯಾ ನಂಬಿಸೇನ್ ಅವರು ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಮೇಘನಾ ಎಂಟ್ರಿಯ ನಂತರ ಇದು ಸೈಲೆಂಟ್ ಆಗಿತ್ತು. 

ಆದರೆ ಇದೀಗ ಮತ್ತೊಂದು ಅಚ್ಚರಿ ಅಂಶ ಏನೆಂದರೆ, ಕುರುಕ್ಷೇತ್ರದ ವಿಕಿಪೀಡಿಯಾದಲ್ಲಿ ಇದೀಗ ಈ ಇಬ್ಬರ ಹೆಸರು ಕಾಣಿಸದೆ. ಹೌದು, ರಮ್ಯಾ ಮತ್ತು ರೆಜಿನಾ ಅವರ ಹೆಸರು ಮಾತ್ರವಲ್ಲ, ತೆಲುಗು ಚಿತ್ರರಂಗದ ಮತ್ತೊಬ್ಬ ನಟಿ ಅನುಸೂಯ ಭಾರಾಧ್ವಜ್ ಅವರ ಹೆಸರು ಸಹ ಕುರುಕ್ಷೇತ್ರದ ವಿಕಿಪೀಡಿಯದಲ್ಲಿ ಕಾಣಿಸಿಕೊಂಡಿದೆ.ಆದರೆ ಇಲ್ಲಿ ಕ್ರಾಸ್ ಚೆಕ್ ಮಾಡಿದಾಗ ರಮ್ಯಾ ಅವರ ವಿಕಿಪೀಡಿಯದಲ್ಲೂ ಕುರುಕ್ಷೇತ್ರ ಹೆಸರಿದೆ. ಆದ್ರೆ, ರೆಜಿನಾ ಮತ್ತು ಅನುಸೂಯ ವಿಕಿಪೀಡಿಯದಲ್ಲಿ ಕುರುಕ್ಷೇತ್ರ ಹೆಸರಿಲ್ಲ ಎಂದು ತಿಳಿದು ಬಂದಿದೆ.


మరింత సమాచారం తెలుసుకోండి: