'ಸಾಹೋ' ಚಿತ್ರದ ಬಗ್ಗೆ ವೀಕ್ಷಕರು ನೆಗೆಟಿವ್ ಆಗಿ ರಿವ್ಯ ಮಾಡಿರೋದು ಇನ್ನೂ ಮಾಡ್ತಾ ಇರೋದು ಎಲ್ಲರಿಗೂ ಗೊತ್ತೇ ಇದೆ. ಪ್ರಭಾಸ್ ನಟನೆ, ಶ್ರಧ್ದಾ ಅಭಿನಯ ಚೆನ್ನಗಿದೆ ಅನ್ನೋದರಲ್ಲಿ ಯಾವುದೇ ಅನುಮಾನವೇ ಇಲ್ಲ. ಆದರೆ ಚಿತ್ರಕತೆ ಮತ್ತು ಸ್ಕ್ರೀನ್ ಪ್ಲೇ ಅನೇಕರಿಗೆ ಬೋರು ಹೊಡೆಸಿರಲಿಕಕ್ಕೂ ಸಾಕು. ಇಷ್ಟೇ ಅಲ್ಲದೇ ಸಾಹೋ ಚಿತ್ರ ಪ್ರೆಂಚ್ ಭಾಷೆಯಿಂದ ಕದ್ದ ಚಿತ್ರ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಆದರೆ ಸಾಹೋ ಇಲ್ಲಿಯತನಕ ಗಳಿಸಿದ್ದೆಷ್ಟು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
.
ಜನರು ರಿವ್ಯೂ ನೋಡಿಕೊಂಡು ಥೀಯಟರ್ ಗೆ ಹೋಗುವುದಿಲ್ಲ ಅನ್ನೋದು ನಿಜ ಅಂತ ಸಾಬೀತು ಪಡಿಸಿದೆ. ಒಳ್ಳೆ ರೀತಿಯಲ್ಲಿ ಕೋಟಿಗಟ್ಟಲೇ ಹಣ ಹಾಕಿ ಮಾರ್ಕೆಟ್ ಮಾಡಿದರೆ ಸಾಕು, ಪ್ರೇಕ್ಷಕರಿಗೆ ತಂತಾನೇ ಬಂದು ಸಿನಿಮಾ ನೋಡುತ್ತಾರೆ ಅನ್ನೋದು ಸತ್ಯ. ಹೌದು ಕಳೆದ ಶುಕ್ರವಾರ ವಿಶ್ವಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಸ್​ನಲ್ಲಿ ಸಾಹೋ ತೆರೆ ಕಂಡಿತ್ತು.ಇದು ಬಾಕ್ಸಾಫೀಸ್​​ನಲ್ಲಿ ಧೂಳ್ ಎಬ್ಬಿಸಿದೆ ಅನ್ನೋದು ಮಾತ್ರ ಸತ್ಯ. ಹೌದು ರಿಲೀಸ್ ಆದ ಮೂರ್ನಾಲ್ಕು ದಿನಗಳಲ್ಲಿಯೇ ಸಾಹೋ ಗಳಿಸಿದ್ದೆಷ್ಟು ಗೊತ್ತಾ?


ರಿಲೀಸ್ ಆದ ಮೂರೇ ದಿನಗಳಲ್ಲಿ ಸಾಹೋ 300 ಕೋಟಿ ಹಣ ಗಳಿಕೆ ಮಾಡಿದೆ. ಟಾಲಿವುಡ್​​​ನ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಹೊಂದಿರೋ ಡಾರ್ಲಿಂಗ್ ಪ್ರಭಾಸ್ ನಟನೆಯ 'ಸಾಹೋ' ಬಾಕ್ಸಾಫೀಸ್​ನಲ್ಲಿ ಕೋಟಿಗಟ್ಟಲೇ ಕೊಳ್ಳೆ ಹೊಡೆಯುತ್ತಿದೆ. ಮೂರೇ ದಿನದಲ್ಲಿ 330 ಕೋಟಿ ತನ್ನ ಕಿಸೆಗೆ ಇಳಿಸಿಕೊಂಡಿದೆ. ಸಾಹೋ ಸುನಾಮಿ ಎಲ್ಲ ಭಾಷೆಯಲ್ಲಿಯೂ ಜೋರಾಗಿಯೇ ಬೀಸುತ್ತಿದೆ. 4 ದಿನಕ್ಕೆ ಸಾಹೋ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 330 ಕೋಟಿ  ಅಂದರೆ ನೀವು ನಂಬಲೇಬೇಕು.


ಇನ್ನು ಕೇವಲ ಹಿಂದಿಯೊಂದರಲ್ಲಿಯೇ ಶತಕ ಬಾರಿಸಿದೆ ಸಾಹೋ. ಹೌದು ಹಿಂದಿ ಭಾಷೆಯಲ್ಲಿಯೇ ನೂರು ಕೋಟಿ ಗಳಿಸಿದೆ. ಅದರ ವಿವಿರ ಇಲ್ಲಿದೆ ನೋಡಿ. 


ಶುಕ್ರವಾರ 24.40 ಕೋಟಿ 
ಶನಿವಾರ 25.20 ಕೋಟಿ 
ಭಾನುವಾರ 29.48 ಕೋಟಿ 
ಸೋಮವಾರ 14.20 ಕೋಟಿ 
ಮಂಗಳವಾರ 9.10 ಕೋಟಿ 
ಒಟ್ಟು 102.38 ಕೋಟಿ 


ಒಟ್ಟಾರೆ ಐದು ದಿನಗಳಲ್ಲಿ ಸಾಹೋ ಹಿಂದಿ ಭಾಷೆ ಒಂದರಲ್ಲಿ ಗಳಿಸದ್ದು ಬರೋಬ್ಬರಿ 100 ಕೋಟಿ. ಮಾಮೂಲಿ ಕಥೆಗೆ ಸಿಕ್ಕಾಪಟ್ಟೆ ಖರ್ಚು ಮಾಡಿ 300 ಕೋಟಿ ಸುರಿದು ಮಾಡಿದ ಸಿಸಿಮಾ ಯಾವುದೇ ತೊಂದರೆ ಇಲ್ಲದೇ ತನ್ನ ಬಂಡವಾಳವನ್ನು ವಾಪಾಸ್ ಪಡೆದು ಲಾಭದತ್ತ ಮುನ್ನುಗ್ಗುತ್ತಿದೆ ಅನ್ನೋದು ಸತ್ಯ.


మరింత సమాచారం తెలుసుకోండి: