ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಅತಿ ದೊಡ್ಡ ಹವಾ ಸೃಷ್ಟಿ ಮಾಡದ್ದು ಅದು ಬಿಗ್ ಬಾಸ್. ಹೌದು ಭಾರತಕ್ಕೆ ಕಾಲಿಟ್ಟ ಮೇಲೆ ಅನೇಕ ಭಾಷೆಗಳಲ್ಲಿ ಯಶಸ್ವಿ ಆಗಿದೆ. ಅಲ್ಲದೇ ಹೀಗಾಗಿ ಇದನ್ನು ಇನನ್ನಿತರೇ ಭಾಷೆಗಳಿಗೆ ತರಲಾಯಿತು. ಕನ್ನಡದಕ್ಕೆ ಇದು ಬಂದಿದ್ದು 6 ವರ್ಷಗಳ ಹಿಂದೆ. ಈಗಾಗಲೇ 6 ಸೀಸನ್ ಮುಗಿಸಿ ಏಳನೆ ಸೀಸನ್‌ಗೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡದ ನೇತೃತ್ವವನ್ನು ಕಿಚ್ಚ ಸುದೀಪ್ ವಹಿಸಿಕೊಂಡಿದ್ದಾರೆ.


ಕಿಚ್ಚ ಸುದೀಪ ಈ ಮೊದಲಿನಿಂದಲೂ ಬಿಗ್ ಬಾಸ್ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಈ ಶೋಗೆ ಹೇಳಿ ಮಾಡಿಸಿದ ವಾಯ್ಸ್. ಈಗಾಗಲೇ 'ಬಿಗ್​ಬಾಸ್' ಕನ್ನಡ ಸೀಸನ್​ 7ರ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಇನ್ನೇನು ಅಕ್ಟೋಬರ್ ತಿಂಗಳಲ್ಲಿ ಅಂದರೆ ಕೇವಲ 15-20 ದಿನಗಳಲ್ಲಿ 'ಬಿಗ್​ಬಾಸ್'​ ಎಲ್ಲರ ಮನೆಯ ಟಿವಿಗಳಿಗೆ ಬರಲಿದೆ. ಇನ್ನು ಆ ಪ್ರೋಮೋ ಕೂಡ ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದೇ ವರ್ಷ ಜನವರಿ ತಿಂಗಳಲ್ಲಿ 'ಬಿಗ್​ಬಾಸ್'​ ಸೀಸನ್​ 6ರಲ್ಲಿ ಶಶಿಕುಮಾರ್ ಟ್ರೋಫಿ ಎತ್ತಿ ಹಿಡಿದಿದ್ದರು. 


ಈ ಭಾರಿ ಅದ್ಯಾರು ಬಿಗ್ ಬಾಸ್ ಆಗುತ್ತಾರೋ ಗೊತ್ತಿಲ್ಲ. ಯಾಕೆಂದರೆ ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ದೊಡ್ಡಮನೆಯೊಳಗೆ ಹೋಗಲಿದ್ದಾರೆ ಎನ್ನುವ ಸಣ್ಣ ಸುಳಿವನ್ನು ಕಲರ್ಸ್​ ಕನ್ನಡ ವಾಹಿನಿ ಮತ್ತು ಮುಖ್ಯಸ್ಥರು ಇನ್ನೂ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ ಭಾರಿ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಇರಲಿದ್ದಾರೆ ಎನ್ನುವುದು ಸಹ ಗುಟ್ಟಿನ ಸಂಗತಿ ಆಗಿಯೇ ಉಳಿದಿದೆ.


ಅಂದಹಾಗೆ, ಸುದೀಪ್ ಅವರ ಬಗ್ಗೆ ಹೇಳಬೇಕೆಂದರೆ ಅವರು ಹೊಸ ಪ್ರೋಮೋದಲ್ಲಿ ಬಹಳ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಇನ್ನು ಮೇಕಿಂಗ್ ವಿಡಿಯೋ ಕೂಡ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇನ್ನು ಕಲರ್ಸ್​ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸುದೀಪ್​ಗೆ ಸೀನ್​ ವಿವರಿಸುತ್ತಿರುವ ದೃಶ್ಯ ಮೇಕಿಂಗ್ ವಿಡಿಯೋದಲ್ಲಿದೆ. ಹೂವಿನ ಹಾರಗಳನ್ನು ಅಲಂಕರಿಸ್ಪಟ್ಟ ಸೆಟ್​ನೊಳಗೆ 'ಬಿಗ್​ಬಾಸ್​' ಪ್ರೋಮೋ ಶೂಟಿಂಗ್ ಮಾಡಲಾಗಿದೆ. ಇದರ ಬಗ್ಗೆ ಎಲ್ಲೆಡೆ ಮೆಚ್ಚಿಗೆ ವ್ಯಕ್ತ ಆಗುತ್ತಿದೆ. ಅಲ್ಲದೇ ಇನ್ನಷ್ಟು ಕಲರ್​ಫುಲ್ ಪ್ರೋಮೊ ಬರುವ ಸಾಧ್ಯತೆ ಇದೆ. ಸುದೀಪ್​ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

మరింత సమాచారం తెలుసుకోండి: