ರಾಜ್ಯದ ನಗರ ಪ್ರದೇಶಗಳಲ್ಲಿ ನಡೆಯುವ ಪೇಯಿಂಗ್ ಗೆಸ್ಟ್ ಮತ್ತು ಹೋಂ ಸ್ಟೇ ಗಳಿಗೆ ಏಕರೂಪದ ಹೊಸ ಕಾಯಿದೆ ತರುವ ಕುರಿತು ಕರಡು ಸಿದ್ಧವಾಗಿದ್ದು, ಶೀಘ್ರದಲ್ಲೇ ಅದನ್ನು ಜಾರಿಗೆ ತರಲ ಮೈತ್ರಿ ಸರ್ಕಾರ ಮುಂದಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರ ಪ್ರದೇಶದಲ್ಲಿ ಸಾವಿರಾರು ಪಿಜಿಗಳಿಗೆ. ಹೋಮ್ ಸ್ಟೇ ಗಳಿವೆ. ಆದರೆ ಅವುಗಳಿಗೆ ಯಾವುದೇ ನೀತಿ ನಿಯಮಗಳು ಇಲ್ಲ. ಭದ್ರತೆಯೂ ಇಲ್ಲ. ಹೀಗಾಗಿ ಸೂಕ್ತ ನೀತಿ ನಿಯಮಗಳನ್ನು ಜಾರಿಗರ ತರಲು ಪಾಲಸಿ ಮಾಡಲಾಗುತ್ತಿದೆ ಎಂದರು.
ಪಿಜಿ ಮತ್ತು ಹೋಂ ಸ್ಟೇ ಗಳಲ್ಲಿ ವಾಸಿಸುವವರಿಗೆ ಭದ್ರತೆ, ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಇತರೆ ಅಗತ್ಯ ನೀತಿ ನಿಯಮಗಳನ್ನು ಜಾರಿಗೆ ತರಲಾಗುವುದು. ರಾಜ್ಯದ ಅನೇಕ ಸಂಘ ಸಂಸ್ಥೆಗಳಿಂದ ಈ ಬೇಡಿಕೆ ಬಂದ ಕಾರಣ, ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದರು.
click and follow Indiaherald WhatsApp channel