ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರವಾಗಿ ಇತ್ತೀಚೆಗಷ್ಟೇ ಮೈತ್ರಿ ಸರ್ಕಾರದ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಇದೀಗ ಮತ್ತೊಮ್ಮೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದು ಚಾಟಿ ಬೀಸಿದ್ದಾರೆ. ಈ ಕುರಿತು ಮತ್ತಷ್ಟು ಡಿಟೇಲ್ಸ್ ನಿಮ್ಮ ಮುಂದೆ.
ಹೌದು, ಹೆಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿದ್ದು, ಇದು ಸದ್ಯಕ್ಕೆ ದೊಡ್ಡ ಚರ್ಚೆಯನ್ನು ಹುಟ್ಟಿ ಹಾಕಿದೆ. ಅಷ್ಟೇ ಅಲ್ಲದೇ ಪಾಟೀಲ್ ಅವರು ಈ ಪತ್ರವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟಕ್ಕೂ ಹೆಚ್.ಕೆ. ಪಾಟೀಲ್ ಅವರು ಪತ್ರ ಬರೆಯಲು ಕಾರಣ ಏನು ಅಂದರೆ, ರಾಜ್ಯದ ಬಡ ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಸುವುದು ಸರ್ಕಾರದ ಕರ್ತವ್ಯ. ಹೀಗಾಗಿ ಇದರ ಬೆಲೆ ಹೆಚ್ಚಿಸಬಾರದು ಎನ್ನುವುದು ಪಾಟೀಲ್ ಅವರ ವಾದ.
ಸರ್ಕಾರ ಪ್ರತಿ ಲೀಟರ್ ಗೆ ಹತ್ತು ಪೈಸೆಯಂತೆ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿತ್ತು. ಆದರೆ ಇದೀಗ 25 ಪೈಸೆಗೆ ಅದನ್ನು ಏರಿಕೆ ಮಾಡಿದೆ.
click and follow Indiaherald WhatsApp channel