ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಅವರು ಇದೀಗ ಬಾಂಬ್ ಒಂದನ್ನ ಸಿಡಿಸಿದ್ದಾರೆ. ಈ ಬಾಂಬ್ ಹೊಸದೇನೂ ಅಲ್ಲದಿದ್ದರೂ ಒಂದಿಷ್ಟು ಪ್ರಾಮುಖ್ಯತೆ ಪಡೆದಿದೆ. ದೇವೇಗೌಡರು ಮೈತ್ರಿ ಸರ್ಕಾರದ ಕುರಿತು ಮಾತನಾಡಿದ ಹೊತ್ತಲ್ಲೇ ಬಿಜೆಪಿ ನಾಯಕ ಹೀಗೆ ಹೇಳಿದ್ದು ನಿಜಕ್ಕೂ ಪ್ರಾಮುಖ್ಯತೆ ಪಡೆದಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿದ್ದು, ಈ ಸರ್ಕಾರ ಪತನ ಆಗುವುದಿಲ್ಲ ಅನ್ಬೋದು ಸುಳ್ಳು. ಈ ಸರ್ಕಾರ ಖಡಿತ ಪತನ ಆಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಅವರು ಬಾಂಬ್ ಸಿಡಿಸಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗಿನಿಂದ ಗೊಂದಲ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಕಾಂಗ್ರೆಸ್ ನವರು ಕುಮಾರಸ್ವಾಮಿಗೆ ಸರ್ಕಾರ ನಡೆಸೋಕೆ ಬಿಡುತ್ತಿಲ್ಲ. ರಾಜ್ಯದಲ್ಲಿ ಇರೋದು ಮೈತ್ರಿ ಸರ್ಕಾರ ಅಲ್ಲ. ಅದೊಂದು ಅವಕಾಶವಾದಿ ಸರ್ಕಾರ ಎಂದು ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.
click and follow Indiaherald WhatsApp channel