ಶಾಸಕ ಸ್ಥಾನಕ್ಕೆ ರಾಜೀನಾನೆ ನೀಡಿದ ಮೈತ್ರಿ ಸರಕಾರ ಬೀಳಿಸೋಕೆ ಸಹಾಯ ಮಾಡಿದವರು ಶಿವಾಜಿ ನಗರದ ಶಾಸಕ ರೋಷನ್ ಬೇಗ್. ಬಿಜೆಪಿ ಸರ್ಕಾರ ರಚನೆ ಮಾಡೋಕೆ ಸಹಾಯ ಮಾಡಿದ್ದೀರಿ ಎಂದು ನೀವು ಹೇಳಿದ್ದನ್ನೆಲ್ಲ  ಕೇಳೋಕೆ ಆಗೋದಿಲ್ಲ ಎಂದು ಬಿಜೆಪಿಯು ಕಾಂಗ್ರೆಸ್‌ ಅನರ್ಹ ಶಾಸಕರಿಗೆ ಟಾಂಗ್ ನೀಡಿದೆ. ಹೀಗಾಗಿ ರೋಷನ್ ಬೇಗ್‌ ಅವರಿಗೆ ಸಹಜವಾಗಿಯೇ ಅಸಮಾಧಾನ ಉಂಟಾಗಿದೆ. 

ಅಷ್ಟಕ್ಕೂ ರೋಷನ್ ಬೇಗ್ ಕೇಳಿದ್ದಾದರೂ ಏನು ಗೊತ್ತಾ? ಬಕ್ರೀದ್ ಹಬ್ಬಕ್ಕೆ ಜಾನುವಾರುಗಳನ್ನು ಬಲಿ ಕೊಡೋಕೆ ಅವಖಾಶ ಕೊಡಬೇಕು. ಅಧಿಕೃತವಾಗಿ ಜಾನುವಾರುಗಳನ್ನು ಸಾಗಾಟ ಮಾಡೋಕೆ ಅವಕಾಶ ನೀಡಬೇಕು. ಈ ವೇಳೆ ಕಿರುಕುಳ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ಕೊಡಿ ಎಂದು ಅನರ್ಹ ಶಾಸಕ ರೋಷನ್ ಬೇಗ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಆದರೆ ಬಿಎಸ್‌ವೈ ಮಾಡಿದ್ದೇನು?

ಆದರೆ ಬಿಎಸ್‌ವೈ ಮಾತ್ರ ಇದರ ಬಗ್ಗೆ ಯಾವುದೇ ಉತ್ತರ ಕೊಟ್ಟಿಲ್ಲ. ಇತ್ತ ಮತ್ತೊಂದು ಕಡೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಇರೋದಾದರೂ ಎನು? ಮುಸ್ಲಿಮರು ಬಕ್ರೀದ್ ಹಬ್ಬ ಆಚರಣೆ ಮಾಡಲಿದ್ದು, ಯಾವುದೇ ಕಾರಣಕ್ಕೂ ಗೋಹತ್ಯೆ ಮಾಡಲು ಅವಕಾಶ ಕೊಡಬಾರದು. ಗೋವುಗಳ ಬಲಿ ನಿಷೇಧ ಕಾಯ್ದೆಯನ್ನ ಅನುಷ್ಠಾನಗೊಳಿಸುವ ಮೂಲಕ ಗೋರಕ್ಷಣೆ ಮಾಡುವಂತೆ ಕೇಳಿಕೊಂಡಿದ್ದಾರೆ. 

ಮೈತ್ರಿ ಸರ್ಕಾರ ಬೀಳಿಸುವಲ್ಲಿ ಅತೃಪ್ತ ಶಾಸಕರ ರಾಜೀನಾಮೆ ದೊಡ್ಡ ಪಾತ್ರವಾಗಿತ್ತು. ಮತ್ತೊಂದು ಕಡೆಯಲ್ಲಿ ಶಿವಾಜಿನಗರ ಶಾಸಕ ರೋಷನ್ ಬೇಗ್ ಕೂಡ ಕಾಂಗ್ರೆಸ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಕೊಟ್ಟಿದ್ದರು. ಅಲ್ಲದೇ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಮಾತನಾಡಿ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದರು. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಯ ಸರ್ಕಾರ ರಚನೆ ಆಶಯಕ್ಕೆ ಸಹಾಯ ಮಾಡಿದ್ರು. ಆದರೆ ಇದೀಗ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದು ಸ್ಪಷ್ಟವಾಗಿದೆ.


మరింత సమాచారం తెలుసుకోండి: