ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅದರಲ್ಲೂ ಯಡಿಯೂರಪ್ಪ ಅವರನ್ನು ಇದೀಗ ನತ್ತೊಮ್ಮೆ ತೀಕ್ಷ್ಣವಾಗಿಯೇ ತಿವಿದಿದ್ದಾರೆ. ಹೌದು ಈಗಿನ ಪರಿಸ್ಥಿತಿ ನೋಡಿದರೆ, ಸರ್ಕಾರ ಟೆಕಾಫ್ ಆಗೋದೇ ಕಷ್ಟ. ಈಈ ಸರ್ಕಾರ ಮೂರು ವರ್ಷಗಳ ಕಾಲ ಆಡಳಿತ ನಡೆಸೋದು ಸಾಧ್ಯವಿಲ್ಲ ಎಂದು ಮಾಜಿ ಸಿಎಂ, ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 


ಹೌದು, ಇಷ್ಟೇ ಅಲ್ಲದೇ ಅವರು ಇನ್ನೊಂದು ವಿಷಯವನ್ನೂ ಹೊರಗಡವಿದ್ದಾರೆ. ಅದೇನಪ್ಪ ಅಂದರೆ, ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದೂ ಕೂಡ ಹೇಳಿದ್ದಾರೆ. ಹೀಗಾಗಿ ರಾಜಕೀಯ ವಲಯದಲ್ಲಿ ಇದೀಗ ಮತ್ತೊಮ್ಮೆ ಜೋರಾದ ಚರ್ಚೆ ಆರಂಭ ಆಗಿದೆ. ಮತ್ತೊಮ್ಮೆ ಚುನಾವಣೆ ನಡೆಯುತ್ತದೆಯಾ ಅನ್ನೋದನ್ನು ಕಾದು ನೋಡಬೇಕಿದೆ. ಆದರೆ ಅದಕ್ಕೂ ಮುನ್ನ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ ಪರಿ ಇಲ್ಲಿದೆ ನೋಡಿ.


ಹೌದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರ ವಿರುದ್ಧ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಅಧಿಕಾರದ ಆಸೆಗೆ ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರನ್ನು ಬಿಜೆಪಿ ನಂಬಿಕೊಂಡಿದೆ. ಅಲ್ಲದೇ ಅವರನ್ನೇ ನಂಬಿಕೊಂಡು ಎಷ್ಟು ದಿನ ಆಡಳಿತ ನಡೆಸುತ್ತದೆ? ಈಗಾಗಲೇ ಅವರದೇ ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂದು ವಿಜೆಪಿ ವಿರುದ್ಧ ಹರಿಹಾಯ್ದರು. ಇಷ್ಟೇ ಅಲ್ಲದೇ ಮಂತ್ರಿಗಳು ಇನ್ನೂ ಕೆಲಸ ಆರಂಭಿಸಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಅವರು ಇದೀಗ ತಿರುಗೇಟು ನೀಡಿದ್ದಾರೆ. ಹೌದು ನನಗೂ ಸಿದ್ದರಾಮಯ್ಯ ವಿರುದ್ಧ ಕೆಟ್ಟ ಭಾಷೆ ಬಳಸುವುದು ಗೊತ್ತಿದೆ. ಆದರೆ, ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದು, ಈ ಗೌರವವನ್ನು ಅವರು ಕಾಪಾಡಿಕೊಳ್ಳಬೇಕು' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದರು.


ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಅವರು ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ಬಳಸುತ್ತಿರುವ ಭಾಷೆ ಸರಿಯಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ, ಮೋದಿ ಹಾಗೂ ಯಡಿಯೂರಪ್ಪನವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಸಿದ್ದರಾಮಯ್ಯ, ದೇಶದ ಪ್ರಧಾನಿ ನರೇಂದ್ರ ಮೋದಿಯನ್ನು ಕೋಮುವಾದಿ, ಕೊಲೆಗಡುಕ, ಸುಳ್ಳಿನ ಸರದಾರ ಎಂದೆಲ್ಲ ಕರೆಯುತ್ತಾರೆ ಇದು ಸರಿಯಲ್ಲ. ಹೀಗೆಲ್ಲ ಕರೆಯಬಾರದು ಎಂದು ಹೇಳಿದ್ದಾರೆ.


మరింత సమాచారం తెలుసుకోండి: