ಕೊರೋನಾ ವೈರಸ್ ದಿನದಿಂದ ದಿನಕ್ಕೆ ಪ್ರಮಚದಲ್ಲಿ ತನ್ನ ಆರ್ಭಟವನ್ನು ಹೆಚ್ಚಿಸಿ ಸಾಕಷ್ಟು ಜನರ ಬಲಿಯನ್ನು ತೆಗೆದು ಕೊಳ್ಳುತ್ತಿರುವ ಮಾಹಾ ಮಾರಿಯಂತೆ ಜಗತ್ತಿನ ಜನರನ್ನು ಆತಂಕಕ್ಕೆ ದೂಡಿದೆ. ಪ್ರತಿನಿತ್ಯವೂ ಕೂಡ ಸಾಕಷ್ಟು ಜನರು ಕೊರೋನಾ ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ನಮ್ಮ ಭಾರತವೂ ಕೂಡ ಹೊರತಾಗಿಲ್ಲ. ಭಾರತದಲ್ಲಿ ಕೊರೋನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಗಳನ್ನು ಘೋಷಣೆಯನ್ನು ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕರ್ನಾಟಕದಲ್ಲಿ ಕೇವಲ 24ಗಂಟೆಯಲ್ಲಿ ಸುಮಾರು 34 ಮಂದಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಅಷ್ಟಕ್ಕೂ ಈ ಪ್ರಕರಣಗಳು ಎಲ್ಲೆ ಕಂಡುಬಂದದ್ದು ಗೊತ್ತಾ..?

 

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 313 ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 15 ಮಹಿಳೆಯರು ಸೇರಿದಂತೆ ೩೪ಕ್ಕೂ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೂ ಸೋಂಕಿಗೆ 13 ಮಂದಿ ಮೃತಪಟ್ಟಿದ್ದರೆ, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 82  ಮಂದಿ ರೋಗ ಮುಕ್ತರಾಗಿ ಮನೆಗಳಿಗೆ ತೆರಳಿದ್ದಾರೆ. ಆದರೂ ಪ್ರತಿ ನಿತ್ಯ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

 

ಬಿಬಿಎಂಪಿ ವ್ಯಾಪ್ತಿಯ 13 ವರ್ಷದ ಬಾಲಕ, 37 ಹಾಗೂ 43 ವರ್ಷದ ಪುರುಷರು ಮತ್ತು 54 ವರ್ಷದ ಮಹಿಳೆ ಹಾಗೂ ೬೫ ವರ್ಷದ ವೃದ್ದೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಗಡಿನಾಡು ಬೆಳಗಾವಿ ಕೊರೊನಾ ಹಾಟ್ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದು, ನಿನ್ನೆ ಸಂಜೆ ಇಂದೀಚೆಗೆ ಇಲ್ಲಿಯವರೆಗೂ 17 ಹೊಸ ಕೊರೊನಾ ಕೇಸ್ಗಳು ದೃಢಪಟ್ಟಿವೆ.

 

ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ 7 ಪ್ರಕರಣಗಳು ದೃಢಪಟ್ಟಿದ್ದರೆ, ಬಾಗೇವಾಡಿ, ಚಿಕ್ಕೋಡಿ, ರಾಯಭಾಗಗಳಲ್ಲಿ 10 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ವಿಜಯಪುರದಲ್ಲೂ 7 ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಮೈಸೂರಿನಲ್ಲಿ ಮೂರು, ಗದಗ, ಕಲ್ಬುರ್ಗಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಬೆಳಕಿಗೆ ಬರುವುದರ ಜತೆಗೆ ಒಂದೇ ದಿನದಲ್ಲಿ 34 ಹೊಸ ಪ್ರಕರಣಗಳು ಪತ್ತೆಯಾಗಿರುವುದರಿಂದ ಇಡೀ ರಾಜ್ಯ ಕೊರೊನಾ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗುತ್ತಿದೆ.

 

ದಿನೇ ದಿನೇ ರಾಜ್ಯದಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಜನ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತ ಗಮನ ಹರಿಸದಿರುವುದು ಜನರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿ ಗೋಚರಿಸುತ್ತಿದೆ.  ಯಾರಿಗಾದರೂ ಸೋಂಕು ಲಕ್ಷಣ ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಗೆ ತೆರಳಿ ಸ್ವಯಂ ತಪಾಸಣೆಗೆ ಒಳಪಡಿಸಿಕೊಂಡು ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕ್ವಾರಂಟೈನ್ಗೆ ಒಳಗಾದರೆ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ.

 

 

 

మరింత సమాచారం తెలుసుకోండి: