ಇಷ್ಟು ದಿನಗಳ ಕಾಲ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ವೈರಾಣುಗಳು ಹೊರಬಂದು ಮತ್ತೊಬ್ಬ ವ್ಯಕ್ತಿಯನ್ನು ಸೇರಿದಾಗ ವೈರಸ್ ಹರಡುತ್ತದೆ ಎಂದು ತಿಳಿದಿತ್ತು ಆದರೆ ಈಗ ಕೆಲವು ಸಂಶೋಧನೆಗಳ ಪ್ರಕಾರ ಕೊರೋನ ವೈರಸ್ ಗಾಳಿಯ ಮೂಲಕ ಮೂಲಕವೂ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

 

ಹೌದು ಕರೊನಾ ವೈರಸ್‌ ಹರಡಲು ಇರುವ ಕಾರಣಗಳ ಪೈಕಿ ಅತಿಮುಖ್ಯವಾದದ್ದು, ಕೆಮ್ಮುವುದು ಹಾಗೂ ಸೀನುವುದು. ಸೋಂಕಿತ ವ್ಯಕ್ತಿಯಿಂದ ಕೆಮ್ಮಿದಾಗ ಅಥವಾ ಸೀನಿದಾಗ ಹೊರಡುವ ಚಿಕ್ಕಚಿಕ್ಕ ಹನಿಗಳು ಬೇರೊಬ್ಬರಿಗೆ ಹರಡಿ ಅದರಿಂದ ಸೋಂಕು ತಗಲುವುದಾಗಿ ಇಲ್ಲಿಯವರೆಗೂ ನಡೆಸಿರುವ ಅಧ್ಯಯನದಲ್ಲಿ ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಅದನ್ನೇ ಹೇಳುತ್ತಿದೆ.

 

ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವಿಜ್ಞಾನಿಗಳ ತಂಡ ಇದಕ್ಕಿಂತಲೂ ಆತಂಕಕಾರಿ ಎನ್ನುವಂಥ ವರದಿಯನ್ನು ಹೊರತಂದಿದ್ದು, ಅದನ್ನು ವಿಶ್ವ ಆರೋಗ್ಯ ಸಂಸ್ಥೆಯ ಮುಂದಿಟ್ಟಿದ್ದಾರೆ. 32 ದೇಶಗಳ 239 ವಿಜ್ಞಾನಿಗಳ ತಂಡ ನಡೆಸಿರುವ ಈ ಅಧ್ಯಯನದಿಂದ ಹೊರಬಂದಿರುವ ವಿಷಯ ಇದಾಗಿದೆ.

 

ಅದೇನೆಂದರೆ, ಕರೊನಾ ಸೋಂಕು ಗಾಳಿಯಲ್ಲಿಯೇ ತೇಲಾಡುತ್ತಿದೆ. ಗಾಳಿಯಲ್ಲಿನ ಸಣ್ಣ ಸಣ್ಣ ಕಣಗಳು ಸೋಂಕಿನಿಂದ ಆವರಿಸಿದ್ದು, ಇದು ಮನುಷ್ಯ ಉಸಿರಾಟ ಮಾಡಿದ ಸಂದರ್ಭದಲ್ಲಿ ಆತನ ದೇಹವನ್ನು ಸೇರುತ್ತವೆ ಎಂದಿದ್ದಾರೆ. ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಈ ಸೋಂಕು ಹರಡುವುದು ನಿಜವಾದರೂ, ಬಾಯಿಯಿಂದ ಬರುವ ಅತಿ ಸೂಕ್ಷ್ಮ ನೀರಿನ ಕಣಗಳು ಗಾಳಿಯಲ್ಲಿಯೇ ತೇಲಾಡುವ ಹಿನ್ನೆಲೆಯಲ್ಲಿ, ಅದನ್ನು ಉಸಿರಾಟ ಮಾಡಿದ ವ್ಯಕ್ತಿಗಳಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿಗೆ ಎನ್ನುವುದು ವಿಜ್ಞಾನಿಗಳ ವಾದ. ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ ಬಳಿಕವಷ್ಟೇ ವಿವರಣೆ ನೀಡಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 

ಈ ಹೊಸ ಅಧ್ಯಯನವನ್ನು ಪುರಸ್ಕರಿಸಿ, ಇಲ್ಲಿಯವರೆಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯನ್ನು ಪರಿಷ್ಕರಿಸುವಂತೆ ಈ ತಂಡ ಕೋರಿಕೊಂಡಿದೆ. ಈ ಹೊಸ ಅಧ್ಯಯನದ ಕುರಿತು ಜರ್ನಲ್‌ನಲ್ಲಿ ಪ್ರಕಟಿಸುವ ಮುನ್ನ ಈ ಬಗ್ಗೆ ಪರಾಮರ್ಶಿಸುವಂತೆ ತಂಡವು ಸಂಸ್ಥೆಗೆ ಪತ್ರ ಬರೆದಿದೆ. ಈ ಬಗ್ಗೆ ತಮ್ಮಲ್ಲಿ ಸಾಕಷ್ಟು ದಾಖಲೆಗಳು ಇರುವುದಾಗಿಯೂ ತಂಡ ಹೇಳಿದೆ.

 

ಸೋಂಕಿತ ವ್ಯಕ್ತಿ ಸೀನಿದ ಸಂದರ್ಭದಲ್ಲಿ ನೀರಿನ ಸಣ್ಣ ಸಣ್ಣ ಕಣಗಳು ಗಾಳಿಯಲ್ಲಿ ಹಾರಾಡುತ್ತವೆ. ಅದು ಗಾಳಿಯಲ್ಲಿಯೇ ಸಾಕಷ್ಟು ಸಮಯ ಇರುವ ಹಿನ್ನೆಲೆಯಲ್ಲಿ, ಅದನ್ನು ಉಸಿರಾಡುವ ವ್ಯಕ್ತಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದ್ದಾರೆ ವಿಜ್ಞಾನಿಗಳ ತಂಡ.

ಆದರೆ ಇದುವರೆಗೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಾವು ಈ ವರದಿಯನ್ನು ಸ್ವೀಕರಿಸಿದ್ದೇವೆ. ಆದರೆ ಇದರ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಸತ್ಯಾಸತ್ಯತೆಯ ಕುರಿತು ವರದಿಯನ್ನು ಬಿಡುಗಡೆ ಮಾಡುತ್ತೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಪ್ರಮುಖ ಡಾ. ಬೆನೆಡೆಟ್ಟಾ ಅಲೆಗ್ರಾಂಜಿ ಹೇಳಿದ್ದಾರೆ.

 

మరింత సమాచారం తెలుసుకోండి: