ಬಹುಭಾಷಾ ನಟಿ, ಗ್ಲಾಮರಸ್ ಬೆಡಗಿ, ವಯಸ್ಸು ನಾಲವತ್ತು ದಾಟಿದ್ದರೂ ಇನ್ನೂ ಚಿರಯೌನೆಯಂತೆ ಕಾಣುವ ಸುಮನ್ ರಂಗನಾಥನ್ ಇದೀಗ ಕೊಡುಗು ಹುಡುಗನ ಕೈ ಹಿಡಿದಿದ್ದಾರೆ. ಸದ್ದಿಲ್ಲದೇ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ ಪ್ರೈಸ್ ನೀಡಿದ್ದಾರೆ.
ಹೌದು, ಸುಮನ್ ರಂಗನಾಥನ್ ಅವರು ಕೊಡಗಿನ ಹುಡುಗ ಸಜನ್ ಅವರನ್ನು ವಿವಾಹವಾದರು. ಕೇವಲ ಕುಟುಂಬದ ಸದಸ್ಯರು ಹಾಗೂ ಆಪ್ತರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ರಿಜಿಸ್ಟರ್ ಆಗೋ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಕೇವಲ ಎಂಟು ತಿಂಗಳ ಹಿಂದೆಯಷ್ಟೇ ಸಜನ್ ಸುಮನ್ ಅವರಿಗೆ ಪರಿಚಯ ಆಗಿದ್ದರು. ಅಲ್ಲದೇ ಇಬ್ಬರ ಆಸಕ್ತಿ ಒಂದೇ ರೀತಿ ಇರೋ ಕಾರಣದಿಂದ ಬಹುಬೇಗ ಹತ್ತಿರವಾಗಿದ್ದರು. ಕಳೆದ ಕೆಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದ ಇವರು ಇದೀಗ ಅಧಿಕೃತವಾಗಿ ರಿಜಿಸ್ಟರ್ ಆಗಿದ್ದಾರೆ.
ಸಿಬಿಐ ಶಂಕರ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟವರು ಸುಮನ್ ರಂಗನಾಥನ್. ನೀರ್ ದೋಸೆ, ಸಿದ್ಲಿಂಗು ಸೇರಿದಂತೆ ಇತ್ತೀಚೆಗೆ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
click and follow Indiaherald WhatsApp channel