ಕಿರಿಕ್ ಪಾರ್ಟಿ ಸಿನಿಮಾ ಮುಖಾಂತರ ಪಡ್ಡೆ ಹುಡುಗರ ಹೃದಯ ಕದ್ದಿದ್ದ ರಶ್ಮಿಕಾ ಮಂದಣ್ಣ, ಒಂದರ ನಂತರ ಒಂದು ಬಿಗ್ ಹಿಟ್ ಸಿನಿಮಾಗಳನ್ನು ಮಾಡಿದರು. ಹೀಗಾಗಿ ಬಹುಬೇಗನೇ ರಶ್ಮಿಕಾ ಬೇಡಿಕೆಯ ನಟಿಯಾಗಿ ಫೇಮಸ್ ಆದರು. ಜೊತೆಗೆ ಕನ್ನಡದಾಚೆಗೂ ಅವಕಾಶಗಳ ಬಾಗಿಲು ತೆರೆಯಿತು.
ಹೌದು, ಇದೀಗ ರಶ್ಮಿಕಾ ಟಾಲಿವುಡ್ ನಲ್ಲಿ ಬ್ಯುಸಿ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತ ಟಾಲಿವುಡ್ ಸ್ಟಾರ್ ನಟರ ಜೊತೆ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ರಶ್ಮಿಕಾ ಕೈಯಲ್ಲಿ ಒಂದು ಕನ್ನಡ ಸಿನಿಮಾ ಇದೆ.
ಇದೀಗ ವಿಷ್ಯ ಏನಪ್ಪ ಅಂದರೆ, ರಕ್ಷಿತ್ ಶೆಟ್ಟಿ ಫ್ಯಾನ್ಸ್ ರಶ್ಮಿಕಾ ಮೇಲೆ ಗರಂ ಆಗಿದ್ದಾರೆ. ಇದಕ್ಕೆ ಕಾರಣ ಏನಂದ್ರೆ, ರಕ್ಷಿತ್ ಶೆಟ್ಟಿ ಜನ್ಮದಿನವೇ ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ರಶ್ಮಿಕಾ ಈ ಚಿತ್ರಕ್ಕೆ ಯಾಕೆ ಶುಭ ಹಾರೈಸಿಲ್ಲ ಎನ್ನುವುದು ಪ್ರಶ್ನೆ.
ರಶ್ಮಿಕಾ ಮಂದಣ್ಣ ತೆಲುಗು ಚಿತ್ರದ ಪೋಸ್ಟರ್ ಹಾಗೂ ಟೀಸರ್ ಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಕನ್ನಡದ ಅದೂ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀ ಮನ್ನಾರಾಯಣ ಚಿತ್ರದ ಕುರಿತು ಒಂದೂ ಮಾತನಾಡಿಲ್ಲ ಅನ್ನೋದೇ ರಕ್ಷಿತ್ ಅಭಿಮಾನಿಗಳ ಸಿಟ್ಟಿಗೆ ಕಾರಣ.
click and follow Indiaherald WhatsApp channel