ಚೆನ್ನೈ, ಕೊರೋನಾ ಸೋಂಕು ಇಡೀ ವಿಶ್ವವನ್ನೇ ವ್ಯಾಪಿಸಿರುವಾಗ ಎಲ್ಲಾ ದೇಶದ ಕೊರೋನಾ ಸೋಂಕುನ ಆತಂಕ ಹೆಚ್ಚುತ್ತಲ್ಲೇ ಇದೆ. ಇದನ್ನು ತಡೆಗಟ್ಟಲು ಮೊದಲನೆದ್ದಾಗಿ ಕೊರೊನಾ ವೈರಸ್ ಅನ್ನು ಅತೀ ವೇಗವಾಗಿ ಕಂಡುಹಿಡಿಯಬೇಕು ಇದಕ್ಕೆ ಅತ್ಯಾದುನಿಕ ಕಿಟ್ಗಳ ಅವಶ್ಯಕತೆ ಇದೆ. ಇದನ್ನು ಪೂರೈಸಿಕೊಳ್ಳಲು ತಮಿಳುನಾಡು ಸರ್ಕಾರ ಚೀನಾ ಕಿಟ್‌ಗಳಿಗೆ ಆರ್ಡ್‌ರ್ ನೀಡಲಾಗಿತ್ತು. ಆದರೆ ಈಗ ಈ ಕಿಟ್‌ಗಳು ಹೈಜಾಕ್ ಆಗಿದೆ ಅಷ್ಟಕ್ಕೂ ಆ ಕಿಟ್‌ಗಳು ಹೈಜಾಕ್ ಆಗಿದ್ದಾರು ಏಕೆ. ಹೈಜಾಕ್ ಮಾಡಿದ್ದಾದರೂ ಯಾರು ಇಲ್ಲಿದೆ ಉತ್ತರ..
ಕೊರೊನಾ ವೈರಸ್ ಜಗತ್ತಿನ ಹಲವು ದೇಶಗಳಲ್ಲಿ ರುದ್ರನರ್ತನ ಮಾಡುತ್ತಿದೆ. ಕೊವಿಡ್ ವಿರುದ್ಧ ಹೋರಾಡಲು ಬಳಕೆಯಾಗುತ್ತಿರುವ ಕಿಟ್ ಅಕಿಟ್ ಚೀನಾ ತಯಾರಿಸಿ ರಫ್ತು ಮಾಡುತ್ತಿದೆ. ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಭಾರತ ಸೇರಿದಂತೆ ಹಲವು ದೇಶಗಳು ಚೀನಾ ಬಳಿಕ ರ್ಯಾಪಿಡ್ ಟೆಸ್ಟ್ ಕಿಟ್ಗೆ ಬೇಡಿಕೆ ಇಟ್ಟಿದೆ.
ಕೇಂದ್ರ ಸರ್ಕಾರ ಸೂಚನೆ ನೀಡುವುದಕ್ಕೂ ಮುಂಚೆಯೇ ತಮಿಳುನಾಡು ಸರ್ಕಾರ ಚೀನಾದ ಬಳಿ ಒಂದು ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಗೆ ಟೆಸ್ಟ್ ಕಿಟ್ ಕಳುಹಿಸಿ ಎಂದು ಬೇಡಿಕೆಯಿಟ್ಟಿದ್ದರು. ತಮಿಳುನಾಡು ಸರ್ಕಾರದ ಬೇಡಿಕೆಗೆ ಚೀನಾ ಸಂಸ್ಥೆ ಕೂಡ ಒಪ್ಪಿತ್ತು. ಆದ್ರೀಗ, ತಮಿಳುನಾಡಿಗೆ ಕಳುಹಿಸಬೇಕಾಗಿದ್ದ ಕಿಟ್ಗಳನ್ನು ಅಮೆರಿಕಗೆ ನೀಡಲಾಗಿದೆ. ಆದ್ದರಿಂದ ತಮಿಳುನಾಡಿನಲ್ಲಿ ಕಿಟ್ಗಳು ಬರುವುದು ತಡವಾಗುತ್ತಿದೆ ಎಂದು ಸರ್ಕಾರದ ಕಾರ್ಯದರ್ಶಿ ಶನ್ಮುಗನ್ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಸೂಚನೆ ನೀಡುವುದಕ್ಕೆ ಮುಂಚೆಯೇ ತಮಿಳುನಾಡು ಸರ್ಕಾರ ಮುಂಜಾಗ್ರತೆ ಕ್ರಮವಾಗಿ, ಒಂದು ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಗೆ ಆರ್ಡರ್ ಮಾಡಿದ್ದೇವೆ. ಅದು ಇನ್ನು ಭಾರತಕ್ಕೆ ಬಂದಿಲ್ಲ. ಭಾರತಕ್ಕೆ ಬಂದ ತಕ್ಷಣ ತಮಿಳುನಾಡಿಗೆ ರವಾನೆಯಾಗುತ್ತೆ. ಮೊದಲು ಒಂದು ಲಕ್ಷ ಕಿಟ್ ಆರ್ಡರ್ ಮಾಡಿದ್ದೇವು. ಬಳಿಕ ನಾಲ್ಕೈದು ದಿನಗಳ ಹಿಂದೆ ಮತ್ತೆ 50 ಸಾವಿರ ಕಿಟ್ ಹೆಚ್ಚುವರಿ ಕೇಳಿದ್ದೇವೆ. ಇನ್ನು 50 ಸಾವಿರ ಕಿಟ್ ತರಿಸುವ ಚಿಂತನೆ ಇದೆ. ಒಟ್ಟು 2 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಗೆ ಟೆಸ್ಟ್ ಕಿಟ್ ತಮಿಳುನಾಡಿಗೆ ಬರಲಿದೆ’ ಎಂದಿದ್ದಾರೆ.
ಚೀನಾದಲ್ಲಿ ಕಿಟ್ ತಯಾರಿಸುವುದು ಸೀಮಿತವಾಗಿದೆ. ಈ ಮಧ್ಯೆ ಅಮೆರಿಕಾ ಅಗತ್ಯವಾಗುಷ್ಟು ಕಿಟ್ ಕಳುಹಿಸಿದೆ. ನಾವು ಬಹಳ ಹಿಂದೆಯೇ ಚೀನಾಗೆ ಕೇಳಿದ್ದೀವಿ. ಹಾಗಾಗಿ, ಮೊದಲ ಹಂತದಲ್ಲಿ 50 ಸಾವಿರ ಹಾಗೂ ಎರಡನೇ ಹಂತದಲ್ಲಿ 50 ಸಾವಿರ ಕಳುಹಿಸುತ್ತೇವೆ ಎಂದು ಮಾತು ಕೊಟ್ಟಿದ್ದರು’ ಎಂದು ತಿಳಿಸಿದ್ದಾರೆ.
ಜರ್ಮನಿ, ಫ್ರಾನ್ಸ್ ದೇಶಗಳು ಸೇರಿದಂತೆ ಹಲವು ದೇಶಗಳು ಅಮೆರಿಕ ವಿರುದ್ಧ ಆರೋಪ ಮಾಡಿದ್ದಾರೆ. ನಮಗೆ ಬರಬೇಕಿದ್ದ ಕಿಟ್ಗಳನ್ನು ಅಮೆರಿಕ ಹೈಜಾಕ್ ಮಾಡಿದೆ ಎಂದು ಹೇಳಿದ್ದರು. ಮತ್ತೊಂದೆಡೆ ಚೀನಾದಿಂದ ಬರುತ್ತಿರುವ ಕಿಟ್ಗಳು ದೋಷಪೂರಿತವಾಗಿದೆ, ಗುಣಮಟ್ಟದಲ್ಲ ಎಂದು ಕೆಲವು ರಾಷ್ಟ್ರಗಳು ದೂರಿದ್ದಾರೆ. ಈ ನಿಟ್ಟಿನಲ್ಲಿ ತಮಿಳುನಾಡಿಗೆ ಬರಬೇಕಿದ್ದ ಕಿಟ್ಗಳನ್ನು ಯುಎಸ್ ಹೈಜಾಕ್ ಮಾಡಿರಬಹುದು ಎಂಬ ಅನುಮಾನ ಕಾಡುತ್ತಿದೆ.
ಮತ್ತೊಂದೆಡೆ ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೆ ಇದೆ. ಇಲ್ಲಿಯವರೆಗೂ 929 ಜನರಿಗೆ ಸೋಂಖು ದೃಢವಾಗಿದ್ದು, ಸುಮಾರು 10 ಜನ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳುತ್ತಿದೆ. ಚೆನ್ನೈ ನಗರದಲ್ಲಿ ಮಾತ್ರ 182 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
click and follow Indiaherald WhatsApp channel