ಕೆಲವು ನಟಿಯರು ಮದುವೆ ಆದ ಮೇಲೆ ಸಿನಿಮಾ ಮಾಡೋದೇ ಇಲ್ಲ. ಆದರೆ ಮತ್ತೆ ಕೆಲವರು ಮದುವೆ ಆದರೂ ಸಿನಿಮಾ ಬಿಡಲ್ಲ ಅಂತಾರೆ. ಈ ಲೆಸ್ಟ್ ಈಗ ಕನ್ನಡದಲ್ಲಿ ಬೆಳೆಯುತ್ತ ಹೋಗುತ್ತಿದೆ. ಹಾಗಾದರೆ, ಇತ್ತೀಚಗೆ ಮದುವೆ ಆದರೂ ಸಿನಿಮಾ ಬಿಡಲ್ಲ ಅಂತಿರೋರು ಯಾರು ಅನ್ನೋದು ಇಲ್ಲಿದೆ.
(ಸಿಂಧು ಲೋಕನಾಥ್)
(ಚಿರಂಜೀವಿ ಸರ್ಜಾ, ಮೇಘನಾ ರಾಜ್)
ಸಿಂಧು ಲೋಕನಾಥ್ ಮತ್ತು ಮೇಘನಾ ರಾಜ್ ಇಬ್ಬರೂ ಇತ್ತೀಚೆಗಷ್ಟೇ ಮದುವೆ ಆಗಿದ್ದರು. ಆದರೂ ಮತ್ತೆ ಸಿನಿಮಾಗಳಲ್ಲಿ ನಟಿಸೋ ಮೂಲಕ ತಾವು ಚಿತ್ರರಂಗ ಬಿಡಲ್ಲ ಎಂದಿದ್ದಾರೆ. ಈ ಸಾಲಿಗೆ ಈಗ ಹೊಸ ಸೇರ್ಪಡೆ ಯಾರಪ್ಪ ಅಂದ್ರೆ, ಅದೇ ನೇಹಾ ಪಟೇಲ್.
(ನೇಹಾ ಪಾಟೀಲ್)
ಹೌದು, ನೇಹಾ ಪಟೇಲ್ ಇತ್ತೀಚೆಗಷ್ಟೇ ಮದುವೆ ಆಗಿದ್ರು. ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ ಅಂತ ಎಲ್ಲರೂ ಭಾವಿಸಿದ್ರು. ಆದರೆ ನೇಹಾ ಪಟೇಲ್ ಮಾತ್ರ ಮದುವೆ ನಂತರವೂ ಸಿನಿಮಾಗಳಲ್ಲಿ ನಟಿಸೋಕೆ ಸಿದ್ಧ ಎನ್ನುತ್ತಿದ್ದಾರೆ. ಮದುವೆ ನಂತರ ಗರ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ನ್ಯೂರಾನ್ ಎನ್ನುವ ಚಿತ್ರವೂ ಬಿಡುಗಡೆಗೆ ತಯಾರಾಗಿದೆ.
click and follow Indiaherald WhatsApp channel