ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರ ರುಸ್ತುಂ ಇದೇ ಜೂನ್ 28 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಶಿವಣ್ಣ ಅವರು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಪೊಲೀಸ್ ಪಾತ್ರ ಶಿವಣ್ಣ ಅವರಿಗೆ ಹೊಸದೇನೂ ಅಲ್ಲ, ಆದರೆ ಖಡಕ್ ಅಧಿಕಾರಿಯಾಗಿ ಶಿವರಾಜ್ ಕುಮಾರ್ ಹೇಗೆ ಅಭಿನಯಿಸಿದ್ದಾರೆ ಅನ್ನೋ ಕುತೂಹಲ ಪ್ರೇಕ್ಷಕರನ್ನು ಕೂತೂಹಲಕ್ಕೆ ಈಡು ಮಾಡಿದೆ ಎನ್ನಬಹುದು.


ಖ್ಯಾತ ಸ್ಟಂಟ್ ಮಾಸ್ಟರ್ ರವಿ ವರ್ಮಾ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇನ್ನು ಚಿತ್ರದ ನಿರ್ಮಾಪಕರು ಜಯಣ್ಣ ಮತತ್ತು ಭೋಗೇಂದ್ರ. ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿವೇಕ್ ಓಬೇರಾಯ್, ಆರ್.ಜೆ. ರೋಹಿತ್ ಕೂಡ ಚಿತ್ರದಲ್ಲಿದ್ದಾರೆ.


ಫುಲ್ ಆಕ್ಷನ್ ಮೂಡ್ ನಲ್ಲಿರೋ ಶಿವಣ್ಣ ಅವರ ಪೋಸ್ಟರ್ ಒಂದನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಇನ್ನು ಚಿತ್ರದ ಸಂಗೀತ ಅನೂಪ್ ಸೀಳಿನ್ ಅವರು ನಿರ್ವಹಿಸಿದ್ದಾರೆ. ಈ ಹಿಂದೆ ಟಗಗರು ಸಿನಿಮಾದಲ್ಲೂ ಶಿವಣ್ಣ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. 


మరింత సమాచారం తెలుసుకోండి: