ಆಶಿಕಾ ರಂಗನಾಥ್ ಗೆ ಈ ವರ್ಷ ಅನೇಕ ಅವಕಾಶಗಳ ಸುರಿಮಳೆಯೇ ಹರಿದಿದೆ ಎಂದರೆ ತಪ್ಪಿಲ್ಲ. ಹೌದು, ಮೊದಲು ಶರಣ್ ಜೊತೆಗೆ ರ್ಯಾಂಬೋ-2 ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸಿದ ನಂತರ ಅದು ಯಶಸ್ಸು ಕಂಡಿತು. ನಂತರ ಹತ್ತು ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 


ಹೌದು, ಆಶಿಕಾ ಈಗಾಗಲೇ ಅವರಾತ ಪುರುಷ ಅನ್ನೋ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಇಶಾನ್ ಅವರ ಜೊತೆ ರೈಮೋ ಚಿತ್ರದಲ್ಲೂ ನಟಿಸೋಕೆ ಒಪ್ಪಿದ್ದಾರೆ. ಇದು ಪವನ್ ಒಡೆಯರ್ ಅವರ ಚಿತ್ರ.  ಇಷ್ಟೇ ಅಲ್ಲದೇ ಇದೀಗ ಪ್ರಜ್ವಲ್ ದೇವರಾಜ್ ಅಭಿನಯದ ಮುಂಬರುವ ಚಿತ್ರದಲ್ಲೂ ಆಶಿಕಾ ರಂಗನಾಥ್ ಕಾಣಿಸಿಕೊಳ್ಳಲಿದ್ದಾರೆ. 


ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದರಲ್ಲಿ ನಾಯಕ ಪೂರ್ಣ ಪ್ರಮಾಣದ ಗ್ಯಾಂಗ್ ಸ್ಟಾರ್ ಆಗಿರುತ್ತಾನೆ. ಆದರೆ ನಾಯಲಿ ಮಾತ್ರ ವೈದ್ಯೆ. ಹೀಗಾಗಿ ಇಲ್ಲಿ ನಾಯಕಿಯ ಪಾತ್ರ ಸ್ವಲ್ಪ ಸವಾಲಿನಿಂದ ಕೂಡಿದೆ ಎನ್ಲಲಾಗಿದೆ. ಇನ್ನೇನು ಜುಲೈನಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ.  


మరింత సమాచారం తెలుసుకోండి: