ಗಾಳಿಪಟ ಚಿತ್ರದಲ್ಲಿ ನಟಿಸಿ ಗುರುತಿಸಿಕೊಂಡಿದ್ದ ಭಾವನಾ ರಾವ್ ಇದೀಗ ಅಭಿನಯದ ಜೊತೆಗೆ ನೃತ್ಯ ನಿರ್ದೇಶಕಿ ಆಗಿದ್ದಾರೆ. ಹೌದು, ಕೆಲವು ನಟಿಯರು ಇತ್ತೀಚಿನ ದಿನಗಳಲ್ಲಿ ನಟನೆಯ ಜೊತೆಗೆ ನಿರ್ದೇಶನ ಮತ್ತು ನಿರ್ಮಾಣದ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಈ ಸಾಲಿಗೆ ಇದೀಗ ಭಾವನಾ ಸೇರಿದ್ದಾರೆ ಎಂದು ಹೇಳಬಹುದು. 


ಗಾಳಿಪಟ ಚಿತ್ರದ ಭಾವನಾ ಉತ್ತಮ ನೃತ್ಯಗಾರ್ತಿ ಅನ್ನೋದು ಅದೆಷ್ಟೋ ಜನಕ್ಕೆ ಗೊತ್ತಿಲ್ಲ. ಹೌದು ಭಾವನಾ ಅವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಹೆಜ್ಜೆ ಎನ್ನುವ ನೃತ್ಯ ಶಾಲೆಯನ್ನು ಅವರು ನಡೆಸುತ್ತಿದ್ದಾರೆ. ಹೀಗೆ ಭಾವನಾ ಅವರಿಗೆ ಸಿನಿಮಾ ಕೋರಿಯೋಗ್ರಫಿ ಮಾಡಬೇಕು ಅನ್ನೋ ಕನಸಿತ್ತು. 


ಅಷ್ಟಕ್ಕೂ ಈ ಕನಸು ನನಸಾಗಿದ್ದು ಯಾವ ಸಿನಿಮಾ ಮೂಲಕ ಗೊತ್ತೆ? ಅದೇ ಯಾನ ಚಿತ್ರ. ಈ ಚಿತ್ರದ ಹಾಡೊಂದಕ್ಕೆ ಭಾವನಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದು ಅವರಿಗೆ ಇದು ಸವಾಲಿನ ಕೆಲಸವಾಗಿತ್ತಂತೆ. ನಟಿಸುವುದು ಸುಲಭ, ಆದ್ರೆ ನೃತ್ಯ ಸಂಯೋಜನೆ ಕಷ್ಟ ಎನ್ನುತ್ತಾರೆ ಭಾವನಾ.


మరింత సమాచారం తెలుసుకోండి: