ಕಣ್ಣು ಮಣಿಯೇ ಕಣ್ಣು ಹೊಡಿಯೇ... ಇದು ಪೈಲ್ವಾನ್ ಚಿತ್ರದ ಹಾಡು. ಈ ಹಾಡು ಇದೀಗ 10 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ಅಲ್ಲದೇ ಈ ಹಾಡಿನಲ್ಲಿ ನಟಿ ಆಕಾಂಕ್ಷಾ ಸಿಂಗ್ ಅವರನ್ನು ವರ್ಣಿಸಲಾಗಿದೆ. ಆಕಾಂಕ್ಷಾಗೆ ಈ ಹಾಡು ಇಷ್ಟವಾಗಿದೆ.


ಈ ಹಾಡು ಆಕಾಂಕ್ಷಗೆ ಇಷ್ಟ ಆಗಿದ್ದಕ್ಕೆ ಅವರು ಈ ಹಾಡಿನ ಜೊತೆಗೆ ತಮ್ಮ ಕಾರ್ ನಲ್ಲಿ ಜಾಲಿ ರೈಡ್ ಹೋಗಿದ್ದಾರೆ, ಕಣ್ಣು ಮಣಿಯೇ ಕಣ್ಣು ಹೊಡಿಯೇ ಅಂತ ಕಾರ್ ನಲ್ಲಿ ತಾಳ ಹಾಕುತತ್ತಿದ್ದಾರೆ. ನಂತರ ಈ ವಿಡಿಯೋ ಶೂಟ್ ಮಾಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.


ಅಷ್ಟಕ್ಕೂ ಈ ಹಾಡಿಗೆ ಸಂಗೀತ ನೀಡಿದ್ದು ಅರ್ಜುನ್ ಜನ್ಯ. ಸಾಹಿತ್ಯ ಡಾ,ವಿನಾಗೇಂದ್ರ ಪ್ರಸಾದ್. ಅಲ್ಲದೇ ಇದು ಪೈಲ್ವಾನ ಸಿನಿಮಾದ ಹಾಡಾಗಿದ್ದು,ಇದರಲ್ಲಿ ಸುದೀಪ್ ಅಭಿನಯಿಸಿದ್ದಾರೆ. ಈಗಾಗಲೇ ಹಿಂದೂ ಶೋ ಹಾಗೂ ತೆಲುವು ಸಿನಿಮಾ ಮಾಡಿದ ಆಕಾಂಕ್ಷಾಗೆ ಪೈಲ್ವಾನ್ ಮೊಟ್ಟ ಮೊದಲ ಕನ್ನಡ ಸಿನಿಮಾ.


మరింత సమాచారం తెలుసుకోండి: