ಬೆಂಗಳೂರು: ‘ಪ್ರೀತಿ ಒಂಥರ ಮಾಯೆ. ಯುವಕರ ಪ್ರೀತಿಯ ಸಮಯವದು. ಹೃದಯದ ಬೆಸುಗೆಯದು. ಪ್ರೀತಿಯ ಬಲೆಗೆ ಸಿಲುಕದ ವ್ಯಕ್ತಿಗಳಿಲ್ಲ, ಅದಕ್ಕೆ ಸೋಲದ ಮನಸುಗಳೇ ಇಲ್ಲ. 18ರಿಂದ 25ರ ವಯಸ್ಸಿನಲ್ಲಿ ಪ್ರೀತಿ-ಪ್ರೇಮ ಎಂದು ಇಂದಿನ ಯುವಸಮುದಾಯ ಜೀವನ ಹಾಳು ಮಾಡಿಕೊಳ್ಳುತ್ತಿದೆ. ಪ್ರೀತಿಯ ಅರ್ಥ ತಿಳಿಯದೆ ಬರೀ ಮೋಜಿನಲ್ಲಿ ತೊಡಗಿದೆ. ನಿಜಕ್ಕೂ ಪ್ರೀತಿ ಎಂದರೇನು ಎಂದು ತಿಳಿಸುವುದೇ ‘18ರಿಂದ 25’ ಚಿತ್ರ’ ಎನ್ನುತ್ತಾರೆ ನಿರ್ದೇಶಕ ಸ್ಮೈಲ್ ಶ್ರೀನು. ಅಷ್ಟಕ್ಕೂ 18 ರಿಂದ 25 ಏನು ಗೊತ್ತಾ!? 

 

18 ರಿಂದ 25ದಿಲ್ ಕಾ ಪ್ರೀತಿ ರೈ ಎನ್ನುತ್ತೆ. ಅಂದರೆ ಪ್ರೀತಿಯ ಭಾವದ ಸಮಯವದು. ‘ಬಳ್ಳಾರಿ ದರ್ಬಾರ್’ ಮತ್ತು ‘ತೂಫಾನ್’ ಚಿತ್ರಗಳಿಗೆ ಆಕ್ಷನ್- ಕಟ್ ಹೇಳಿದ್ದ ಸ್ಮೈಲ್ ಶ್ರೀನು, ಇದೀಗ ಪ್ರೀತಿ-ಪ್ರೇಮದ ಶಿಕ್ಷಕರಾಗಿದ್ದಾರೆ. ಅರ್ಥಾತ್ ಪ್ರೀತಿ ಎಂದರೇನು ಎಂದು ತಿಳಿಸಲು ‘18 ರಿಂದ 25’ಚಿತ್ರ ನಿರ್ದೇಶಿಸುತ್ತಿದ್ದಾರೆ. ‘ಚಿತ್ರದಲ್ಲಿ ಪ್ರೀತಿಯ ಕುರಿತು ತಿಳಿಸುವ ಮೂರು ಲವ್ ಸ್ಟೋರಿಗಳಿವೆ.

 

ಪ್ರತಿಯೊಂದು ಕೂಡ ವಿಭಿನ್ನ. ಪ್ರೀತಿ ಬಗ್ಗೆ ಈ ಮೂರು ಜೋಡಿಯಲ್ಲಿಯೂ ಬೇರೆ ಬೇರೆಯದ್ದೇ ದೃಷ್ಟಿಕೋನ. ಆದರೆ ಕೊನೆಗೆ ಎಲ್ಲರಿಗೂ ಪ್ರೀತಿಯ ನಿಜಾರ್ಥ ಅರ್ಥವಾಗುತ್ತದೆ. ಅದುವೇ ಚಿತ್ರದ ಕಥೆ’ ಎಂದು ಹೇಳುತ್ತಾರೆ ಶ್ರೀನು. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಹೈದರಾಬಾದ್, ಬೆಂಗಳೂರು, ಜಿಂದಾಲ್ ಸೇರಿ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಇದೇ ತಿಂಗಳಲ್ಲಿ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗುವುದು. ಫೆಬ್ರವರಿಯಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಇದೆ’ ಎನ್ನುವುದು ನಿರ್ದೇಶಕ ಶ್ರೀನು ಅವರ ಮಾತಾಗಿದೆ. 

 

‘ಸ್ಮೈಲ್ ಜೋಹರ್ ಟಾಕೀಸ್’ ಅಡಿಯಲ್ಲಿ ಚಿತ್ರ ನಿರ್ವಣವಾಗಿದ್ದು, ಸ್ಮೈಲು ಶ್ರೀನು ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನದ ಜವಾಬ್ದಾರಿ ಹೊರುವ ಜತೆಗೆ ಬಂಡವಾಳ ಕೂಡ ಹಾಕಿದ್ದಾರೆ. ಯುವಪ್ರತಿಭೆ ಅಭಿರಾಮ್ ‘ಓಳ್ ಮುನ್ಸಾಮಿ’ ಮತ್ತು ‘ರತ್ನಮಂಜರಿ’ ಚಿತ್ರಗಳಲ್ಲಿ ಅಭಿನಯಿಸಿದ್ದ ವಿದ್ಯಾಶ್ರೀ ಜೋಡಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೊಸಬರ ದಂಡೇ ಪಾತ್ರವರ್ಗದಲ್ಲಿದೆ. ಚರಣ್ ಅರ್ಜುನ್ ಸಂಗೀತ, ಶಿವ ಕೆ. ನಾಯ್ಡು ಛಾಯಾಗ್ರಹಣ ಚಿತ್ರಕ್ಕಿದೆ.

మరింత సమాచారం తెలుసుకోండి: