ಬಾಲಿವುಡ್ ನಟ ಶಾಹಿದ್ ಕಪೂರ್ ಇದೀಗ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಲೋಕದಲ್ಲಿ ಹರಿದಾಡುತ್ತಿದೆ. ಹೌದು ಅವರು ಈ ಹಿಂದೆ ಪಡೆಯುತ್ತಿದ್ದ ಸಂಭಾವನೆಗಿಂತ 4 ಪಟ್ಟು ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.


ಅಷ್ಟಕ್ಕೂ ಶಾಹೀದ್ ಕಪೂರ್ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾದರೂ ಯಾಕೆ ಅನ್ನೋದಕ್ಕೆ ಉತ್ತರ ಇಲ್ಲಿದೆ ನೋಡಿ. ಶಾಹೀದ್ ಕಪೂರ್ ಕಬೀರ್ ಸಿಂಗ್ ಸಿನಿಮಾದಲ್ಲಿ ಅಭೀನಯಿಸಿದ ನಂತರ ಅವರ ವೃತ್ತಿ ಜೀವನ ಹೊಸ ತಿರುವು ಪಡೆದುಕೊಂಡಿದ್ದು, ಮುಂಬರುವ ಚಿತ್ರಕ್ಕಾಗಿ ಅವರ 40 ಕೋಟಿ ಸಂಭಾವನೆ ಕೇಳಿದ್ದಾರೆ.


ಹೌದು, ಕಬೀರ್ ಸಿಂಗ್ ಚಿತ್ರ ಈ ವರ್ಷ ಹೆಚ್ಚು ಗಳಿಕೆಯ ಚಿತ್ರವಾಗಿದ್ದು, ಸುಮಾರು 270 ಕೋಟಿಗಿಂತಲೂ ಅಧಿಕ ಹಣ ಗಳಿಕೆ ಮಾಡಿದೆ. ಹೀಗಾಗಿ ಶಾಹೀದ್ ತಮ್ಮ ಸಂಭಾವನೆಯನ್ನು 10 ಕೋಟಿಯಿಂದ 40 ಕೋಟಿಗೆ ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ. 


ತೆಲುಗು ಚಿತ್ರ ಜರ್ಸಿಯ ರಿಮೇಕ್ ನಲ್ಲಿ ಅಭಿನಯಿಸೋಕೆ ಶಾಹೀದ್ ಕಪೂರ್ ಗೆ ಅವಕಾಶ ಒಲಿದು ಬಂದಿದೆ. ಈ ಚಿತ್ರಕ್ಕಾಗಿ ಅವರು 40 ಕೋಟಿ ರೂ.ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. 



మరింత సమాచారం తెలుసుకోండి: