ಬಾಲಿವುಡ್ ನ ಕೆಲವು ಸ್ಟಾರ್ ನಟರು ರುಸ್ತುಂ ಚಿತ್ರ ನೋಡೋಕೆ ಕಾತುರದಿಂದ ಕಾಯುತ್ತಿದ್ದಾರಂತೆ. ಹೌದು, ನಟ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಇದೀಗ ಬಾಲಿವುಡ್ ಅಂಗಳದಲ್ಲೂ ಧೂಳ್ ಎಬ್ಬಿಸಿದೆ. ಈ ಕುರಿತು ಮತ್ತಷ್ಟು ಡಿಟೇಲ್ಸ್ ನಿಮ್ಮ ಮುಂದೆ ಇಲ್ಲಿದೆ.
ಹೌದು, ಶಿವಕುಮಾರ್ ಅವರ ಅಭಿನಯದ ಈ ಚಿತ್ರವನ್ನು ನೋಡುವುದಾಗಿ ಹೇಳಿರುವ ನಟರು ಬೇರಾರೂ ಅಲ್ಲ. ಬಾಲಿವುಡ್ ನ ಸಲ್ಮಾನ್ ಖಾನ್, ಶಾರುಖ್ ಖಾನ್, ಅಜಯ್ ದೇವ್ ಗನ್, ಪ್ರಭುದೇವ್, ತೆಲಗು ನಟ ನಾಗಾರ್ಜುನ್. ಈ ಎಲ್ಲರೂ ರುಸ್ತುಂ ನೋಡೋದಾಗಿ ಹೇಳಿದ್ದಾರಂತೆ.
ಹೌದು, ಈ ವಿಷಯವನ್ನು ಹೇಳಿದ್ದು ಬೇರೆ ಯಾರೂ ಅಲ್ಲ. ಇದುವರೆಗೂ ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿದ್ದ ರವಿವರ್ಮ. ರವಿವರ್ಮ ಅವರು ರುಸ್ತುಂ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ ಆಗಿರುವುದರಿಂದ ತುಂಬ ಕಮರ್ಶಿಯಲ್ ಆಗಿ ಮಾಸ್ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ.
click and follow Indiaherald WhatsApp channel