ಅದ್ಭುತ ಮಾತುಗಾರ, ಕಾಮಿಡಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೃಜನ್ ಲೋಕೇಶ್ ಮುಖ್ಯ ಭೂಮಿಕೆಯ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ 2 ಗೀತೆಗಳನ್ನು ಮಲೇಶಿಯಾದ ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ. ತೇಜಸ್ವಿ ನಿರ್ದೇಶನದಲ್ಲಿ  ಮಲೇಶಿಯಾದ ಹೆಸರಾಂತ ಸಹ ನೃತ್ಯ ಕಲಾವಿದರನ್ನು ಹಾಡಿಗಾಗಿ ಬಳಸಿಕೊಂಡಿರುವುದು ತುಂಬಾ ವಿಶೇಷತೆಯಾಗಿದೆ. ಪ್ರಸ್ತುತ ಈ ಹಾಡುಗಳನ್ನು ಅದೇ ನೆಲದಲ್ಲಿ ಶೂಟ್ ಮಾಡಲು ಬಲವಾದ ಕಾರಣವಿದೆ ಎಂದು ತಿಳಿಸಿದ್ದಾರೆ. ಅದನ್ನು ತೆರೆಮೇಲೆಯೇ ನೋಡಿ ಎಂದು ತೇಜಸ್ವಿ ತಿಳಿಸಿದ್ದಾರೆ. 


ಸಿನಿಮಾದ ಪ್ರತಿ ಹಾಡುಗಳು ಕೂಡ ಮಜಭೂತಾಗಿ ಮೂಡಿಬಂದಿವೆ, ಒಂದೊಂದು ಹಾಡು ಕೂಡ ತನ್ನದೇ ಆದ ರೂಪ ಪಡೆದುಕೊಂಡಿದೆ ಪ್ರತಿ ಹಾಡಿಗೂ ಹೊಸದೊಂದು ಕಾನ್ಸೆಪ್ಟ್ ಇಟ್ಟುಕೊಂಡು ಶೂಟ್ ಮಾಡಲಾಗಿದೆ. ಮಲೇಶ್ಯಾದಲ್ಲಿ ಚಿತ್ರೀಕರಣವಾದ ಎರಡು ಹಾಡುಗಳು ಕೂಡ ಈಗಾಗಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುತ್ತಾರೆ ಸೃಜನ್.


ಈ ಸಿನಿಮಾದ ಕಥೆಯೊಂದಿಗೆ ಹಾಡುಗಳು ಕೂಡ ಸಾಗುತ್ತವೆಯಂತೆ. ಒಂದು ಅರ್ಥದಲ್ಲಿ ಹಾಡುಗಳು ಕೂಡ ಕತೆ ಹೇಳುತ್ತವೆ ಹಾಗಾಗಿ ಆಯಾ ಕಥೆಗೆ ಒಪ್ಪುವಂತೆ ಸಾಂಗ್ ಶೂಟ್ ಮಾಡಿದ್ದಾರೆಂದು ತಿಳಿದುಬಂದಿದೆ. ನಿರ್ದೇಶಕರು ಇಡೀ ಹಾಡುಗಳು ಕಲರ್ಫುಲ್ ಆಗಿ ಮೂಡಿಬಂದಿದೆ ಹಾಡಿನ ಮತ್ತೊಂದು ಸ್ಪೆಷಲ್ ಅಂದರೆ ಸೃಜನ್ ಅವರ ಕಾಸ್ಟ್ಯೂಮ್ ವಿಭಿನ್ನವಾಗಿ ಡಿಸೈನ್ ಮಾಡಲಾಗಿದೆ ಎನ್ನುತ್ತಾರೆ. ಮಾತಿನಲ್ಲಿಯೇ ಮರಳು ಮಾಡುತ್ತಿದ್ದ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಈಗ ಹೆಜ್ಜೆ ಹಾಕಲು ಕೂಡ ಸೈ ಎಂದಿದ್ದಾರೆ. 


ತಮ್ಮ ಮಾತಿನ ಶೈಲಿಯಿಂದ ಜನರ ಮನಗೆದ್ದ ಇವರು ಇದೇ ಶೈಲಿಯಲ್ಲಿ ಕಣ್ಮುಂದೆ ಬರಲಿದ್ದಾರೆ.  ನಿರ್ದೇಶಕರು ವಿಜಯಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ 'ಹೈಟು ಆರಡಿ' ಮತ್ತು ಸಂತೋಷ್ ವೆಂಕಿ ಹಾಡಿರುವ 'ಟಾಕಿಂಗ್ ಸ್ಟಾರ್' ಗೀತೆಗಳನ್ನು ಮಲೇಶಿಯಾದಲ್ಲಿ ಸೆರೆ ಹಿಡಿಯಲಿದೆ 'ಹೈಟಿಗೆ' ಕವಿರಾಜ್ ಸಾಹಿತ್ಯ ಬರೆದಿದ್ದಾರೆ ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ  ಟಾಪ್ ಲಿಸ್ಟ್ನಲ್ಲಿವೆ,  ಸಿನಿಮಾ ನೋಡಿದ ನಂತರ ಈ ಹಾಡುಗಳಿಗೆ ಮತ್ತಷ್ಟು ಜನಪ್ರಿಯತೆ ಸಿಗಲಿದೆ ಎನ್ನುವುದು ನಿರ್ದೇಶಕರ ಮಾತು ಸೃಜನ ನಟಿಸಿ ನಿರ್ಮಾಣ ಮಾಡಿರುವ ಸಿನಿಮಾವಿದು ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. 


Find out more: