ಪಿಂಕ್ ಬಾಲ್ ನಲ್ಲಿ ರನ್ ಮಳೆ ಹರಿಸಿ ಸೆಂಚುರಿ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮದನ್ನಾಗಿಸಿಕೊಂಡಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ 106 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ (136) ಶತಕದ ಬೆಂಬಲದೊಂದಿಗೆ ಒಂಬತ್ತು ವಿಕೆಟ್ ನಷ್ಟಕ್ಕೆ 247 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದೆ. ಇದರ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 241 ರನ್ ಅಂತರದ ಬೃಹತ್ ಮುನ್ನಡೆ ಕಲೆ ಹಾಕಿದೆ. ಈ ಮೊದಲು ಪ್ರಥಮ ದಿನದಾಟದಲ್ಲಿ ಭಾರತೀಯ ತ್ರಿವಳಿ ವೇಗಿಗಳ ಮಾರಕ ದಾಳಿಗೆ ಸಿಲುಕಿದ ಬಾಂಗ್ಲಾದೇಶ 106 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತ್ತು.
 
ದಿನದಾಟದ ಟೀ ವಿರಾಮದ ಬಳಿಕವೂ ಬಾಂಗ್ಲಾ ಪತನ ಮುಂದುವರಿಯಿತು. ಮೊಹಮ್ಮದ್ ಮಿಥುನ್ (6) ಹಾಗೂ ಇಮ್ರುಲ್ ಕೇಯ್ಸ್ (5) ವಿಕೆಟುಗಳನ್ನು ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ಹಂಚಿಕೊಂಡರು. ಇದರೊಂದಿಗೆ 13 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತು.
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬಾಂಗ್ಲಾ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿರುವ ಇಶಾಂತ್ ಶರ್ಮಾ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಮಾರಕವಾಗಿ ಕಾಡಿದರು.
 
ಖಾತೆ ತೆರೆಯುವ ಮುನ್ನವೇ ಶದ್ಮಾನ್ ಇಸ್ಲಾಂ (0) ಮತ್ತು ನಾಯಕ ಮೊಮಿನುಲ್ ಹಕ್ ಪೆವಿಲಿಯನ್ ಸೇರಿಕೊಂಡರು. ಪರಿಣಾಮ 2 ರನ್ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟುಗಳನ್ನು ಕಳೆದುಕೊಂಡಿತು. ಟೀ ವಿರಾಮಕ್ಕೆ 7/2 ರನ್ ಪೇರಿಸಿದ ಪ್ರವಾಸಿ ಬಾಂಗ್ಲಾದೇಶ. ಈ ನಡುವೆ ಬಾಂಗ್ಲಾ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಎಸೆದ ಚೆಂಡು ಮೊಹಮ್ಮದ್ ಮಿಥುನ್ ಹೆಲ್ಮೆಟ್‌ಗೆ ನೇರವಾಗಿ ಬಡಿಯಿತು. ಪರಿಣಾಮ ಫಿಸಿಯೋ ಮೈದಾನ ಪ್ರವೇಶಿಸಿ ಬ್ಯಾಟ್ಸ್‌ಮನ್‌ಗೆ ತುರ್ತು ಚಿಕಿತ್ಸೆಯನ್ನು ನೀಡಿದರು. ಬಳಿಕ ಮಿಥುನ್ ಬ್ಯಾಟಿಂಗ್ ಮುಂದುವರಿಸಿದರು.
 
ಈಡನ್ ನಲ್ಲಿ ನಡೆಯುತ್ತಿರುವ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತೇ ಅಬ್ಬರಿಸಿದ್ದು, ಲಯಕ್ಕೆ ಮರಳಿದ್ದಾರೆ.ಅದರ ಜೊತೆಗೆ ಭಾರತೀಯ ಟೆಸ್ಟ್ ತಂಡದ ನಾಯಕರೊಬ್ಬರು ಮೊದಲ ಬಾರಿಗೆ 5000ರನ್ ಪೂರೈಸಿದ ದಾಖಲೆ ಬರೆದರು.

మరింత సమాచారం తెలుసుకోండి: