ವಿಶ್ವದಾದ್ಯಂತ ಕೊರೊನಾ ಎಂಬ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಈ ಕಿಲ್ಲರ್ ವೈರಸ್ ಸಾವಿರಾರು ಜನರನ್ನು ಬಲಿ ಪಡೆಯುತ್ತಿದೆ. ಕೊರೊನ ಭೀತಿಯಿಂದ ಸಂಪೂರ್ಣ ಭಾರತ ಲಾಕ್ ಡೌನ್ ಆಗಿರುವುದರಿಂದ  ಚಿತ್ರರಂಗ ಸೇರಿದಂತೆ ಎಲ್ಲಾ ವಿಭಾಗಗಳ ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿತ್ರರಂಗವನ್ನೇ ನೆಚ್ಚಿಕೊಂಡಿದ್ದ ಅನೇಕರು ಸಂಕಷ್ಟದಲ್ಲಿದ್ದಾರೆ ಆದರೆ ಯಾರೋಬ್ಬ ಕನ್ನಡ ಕಲಾವಿದರೂ ಇವರಿಗೆ ಸಹಾಯ ಮಾಡುತ್ತಿಲ್ಲ ಎಂಬ ಮಾತು ಇತ್ತೀಚೆಗೆ ತುಂಬಾ ಹರಿದಾಡುತ್ತಿತ್ತು. ಆದರೆ ಇದಕ್ಕೆ ಜಗ್ಗೇಶ್ ಖಡಕ್ಕಾಗಿ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಹೇಳಿರೋದೇನು? 

 

ಕೊರೋನಾ ವೈರಸ್ ಇಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಮಯದಲ್ಲಿ ಯಾವುದೇ ಸಿನಿಮಾಗಳ ಚಿತ್ರೀಕರಣ ನಡೆಯದ ಕಾರಣ  ಸಾಕಷ್ಟು  ಸಿನಿಮಾ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ ಇಂತವರಿಗೆ ಸಹಾಯ ಮಾಡಲು ಅನೇಕರು ಮುಂದೆ ಬಂದಿದ್ದಾರೆ ಆದರೆ ಕನ್ನಡ ಸ್ಟಾರ್ ಕಲಾವಿದರು ಯಾಕೆ ತಮ್ಮದೇ ಕಾರ್ಮಿಕರಿಗೆ ಸಹಾಯ ಹಸ್ತ ಚಾಚುತ್ತಿಲ್ಲ ಎನ್ನುವ ಪ್ರಶ್ನೆ ಇತ್ತೀಚೆಗೆ ಎದ್ದಿತ್ತು. ಹೀಗೆ ಪ್ರಶ್ನೆ ಮಾಡುವವರಿಗೆ ನಟ ಜಗ್ಗೇಶ್ ಅವರು ಟ್ವಿಟರ್ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ.

 

ಜಗ್ಗೇಶ್ ಮೊದಲಿನಿಂದಲೂ ಕಷ್ಟಪಡುವವರನ್ನು ಕಂಡಾಗ ತನ್ನ ಕೈಲಾದ ಸಹಾಯ ಮಾಡುತ್ತಲೇ ಬಂದಿದ್ದಾರೆ. ಅವರಿಂದ ಸಹಾಯ ಪಡೆದ ಸಾಕಷ್ಟು ಜನ ಅದನ್ನು ಹೇಳಿಕೊಂಡಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲಿ ಅವರು ಸುಮ್ಮನಿದ್ದಾರೇ, ಖಂಡಿತ ಇಲ್ಲ. ಜಗ್ಗೇಶ್ ಅವರ ಟ್ವೀಟ್ನಲ್ಲಿ ಏನಿದೆ ಎಂದು ನೋಡುವುದಾದರೆ, ನಾವು ಡಂಗೂರ ಹೊಡೆದು ಜನರಿಗೆ ಕಾಣುವಂತೆ ಕೆಲ್ಸ ಮಾಡೋಲ್ಲ . ನಮ್ಮ ಒಳಗೆ ಒಬ್ಬನಿದ್ದಾನೆ ಅವನ ಹೆಸರು ದೇವರು ಅಂತ. ಅವನನ್ನು ಮೆಚ್ಚಿಸಲು ಅಷ್ಟೇ ಕೆಲಸ ಮಾಡುತ್ತೇವೆ.

 

ನಿಮಗೆ ವಾಕರಿಕೆ ಆಗದಿದ್ದರೆ ಹೇಳಿ, ಪ್ರತಿದಿನ ತಮಟೆ ಹೊಡೆದು ನಮ್ಮ ಕಾರ್ಯದ ಬಗ್ಗೆ ಅನುಮಾನ ಇದ್ದವರಿಗೆ ತೋರಿಸುತ್ತೇವೆ. ಸಾಧ್ಯವಾದರೆ ಸಹಾಯ ಮಾಡಿ. ಇಲ್ಲಾ ಅಂದ್ರೆ ಸುಮ್ಮನಿರಿ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಬಡವರಿಗಾಗಿ ಸಾಕಷ್ಟು ಸಹಾಯ ಮಾಡುತ್ತಿರುವ ಜಗ್ಗೇಶ್ ಅವರು ತಮ್ಮ ತಂಡದ ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ.

 

 

మరింత సమాచారం తెలుసుకోండి: